ಲಕ್ನೋ, ಡಿ 27 (DaijiworldNews/MS): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು , ' ಯುವಕರ ಕನಸುಗಳನ್ನು ಹೊಸಕಿ ಹಾಕುತ್ತಿದ್ದಾರೆ' ಎಂದು ಅಪಾದಿಸಿರುವ ಕಾಂಗ್ರೆಸ್ ಪಕ್ಷವೂ ಯೋಗಿ ಅವರನ್ನು 'ಬುಲ್ಡೋಜರ್ನಾಥ್' ಹಾಗೂ "ಬುಲ್ಡೋಜರ್ಗಳ ಅಧಿಪತಿ "ಎಂದು ಕರೆದಿದ್ದಾರೆ.
ಚುನಾವಣಾ ಪ್ರಚಾರದ ಭಾಗವಾಗಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ "ಲಡ್ಕಿ ಹೂ, ಲಾಡ್ ಸಕ್ತಿ ಹೂ" ಎಂಬ ಅಭಿಯಾನದ ಪ್ರಯುಕ್ತ ಐದು ಕಿಮೀ ಓಟವನ್ನು ನಡೆಸಲು ಲಕ್ನೋ ಪೊಲೀಸರು ಅವಕಾಶ ನಿರಾಕರಿಸಿದ ಒಂದು ದಿನದ ನಂತರ ಕಾಂಗ್ರೆಸ್ ಈ ಆರೋಪ ಮಾಡಿದೆ.
ಲಕ್ನೋದಲ್ಲಿ ಆಯೋಜಿಸಿದ್ದ ಮ್ಯಾರಥಾನ್ನಲ್ಲಿ ಓಡಲು ಬಯಸಿದ್ದ ಹೆಣ್ಣುಮಕ್ಕಳ ಕನಸನ್ನು ಮುಖ್ಯಮಂತ್ರಿ ಧಮನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
'ಬುಲ್ಡೋಜರ್ನಾಥ್'ನ ವಿಧ್ವಂಸಕ ಸರ್ಕಾರವು ಯುವಕರ ಕನಸುಗಳನ್ನು ಪದೇ ಪದೇ ತುಳಿಯುತ್ತದೆ. ಕೆಲವೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ, ಕೆಲವೊಮ್ಮೆ ನೇಮಕಾತಿಯನ್ನು ಘೋಷಿಸದೆ ಮತ್ತು ಕೆಲವೊಮ್ಮೆ ಬಲಪ್ರಯೋಗ ಮಾಡುವುದರ ಮೂಲಕ ," ಎಂದು ಕಾಂಗ್ರೆಸ್ ಟ್ವೀಟ್ನಲ್ಲಿ ಹೇಳಿದೆ.
"ಈ ಬಾರಿ, ಯೋಗಿಯ ಮಹಿಳಾ ವಿರೋಧಿ ಬುಲ್ಡೋಜರ್, ಧೈರ್ಯಶಾಲಿ ಹುಡುಗಿಯರ ಕನಸುಗಳ ಮೇಲೆ ಚಲಿಸಿದೆ " ಎಂದು ಪಕ್ಷ ಸೇರಿಸಿದೆ.
"ಆದರೆ ಸಮಯ ಬಂದಾಗ ಈ ಭೂಮಿಯ ಮೇಲಿನ ಯಾವುದೇ ಶಕ್ತಿಯು ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿಲ್ಲ. #LadkiHoonLadSaktiHoon ಎಂಬ ಘೋಷಣೆ ಇಡೀ ರಾಜ್ಯದಲ್ಲಿ ಪ್ರತಿಧ್ವನಿಸುತ್ತಿದೆ. ಮಹಿಳಾ ಶಕ್ತಿಯು ಅಧಿಕಾರದ ಹಕ್ಕನ್ನು ಪಡೆಯಲು ಸಿದ್ಧವಾಗಿದೆ" ಎಂದು ಪಕ್ಷದ ಮತ್ತೊಂದು ಟ್ವೀಟ್ ನಲ್ಲಿ ಹೇಳಿದೆ.
ಲಕ್ನೋದಲ್ಲಿ ರೇಸ್ ನಡೆಸಲು ಪಕ್ಷಕ್ಕೆ ಅನುಮತಿ ನಿರಾಕರಿಸಿದ್ದರಿಂದ ಭಾನುವಾರ ಝಾನ್ಸಿಯಲ್ಲಿ ರೇಸ್ ನಡೆಯಿತು.
ಝಾನ್ಸಿಯಲ್ಲಿ ನಡೆದ ಐದು ಕಿಮೀ ಮ್ಯಾರಥಾನ್ನಲ್ಲಿ 10,000 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು ಎಂದು ಯುಪಿ ಕಾಂಗ್ರೆಸ್ನ ವಕ್ತಾರ ವಿಕಾಸ್ ಶ್ರೀವಾಸ್ತವ ಮಾಧ್ಯಮಗಳಿಗೆ ತಿಳಿಸಿದ್ದಾರೆ.