ಪಾಟ್ನಾ, ಡಿ. 26 (DaijiwoldNews/HR): ಬಿಹಾರದ ಮುಜಾಫರ್ ನಗರದಲ್ಲಿರುವ ಕುರ್ಕುರೆ ಮತ್ತು ನೂಡಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು10 ಮಂದಿ ಮೃತಪಟ್ಟ ಘಟನೆ ನಡೆದಿದೆ.
ಮುಜಾಫರ್ನಗರ ಕೈಗಾರಿಕಾ ವಲಯದಲ್ಲಿರುವ 'ಮೋದಿ ಕುರ್ಕುರೆ ಮತ್ತು ನೂಡಲ್ಸ್' ಕಾರ್ಖಾನೆಯಲ್ಲಿ ಭಾನುವಾರ ಬಾಯ್ಲರ್ ಸ್ಫೋಟಗೊಂಡಿದ್ದು, ಭಾರೀ ಶಬ್ದ ಸುಮಾರೂ 5 ಕೀ.ಮಿ.ದೂರದ ವರೆಗೂ ಕೇಳಿಸಿದೆ.
ಸ್ಫೋಟದಿಂದಾಗಿ ಅಕ್ಕಪಕ್ಕದ ಕಾರ್ಖಾನೆಗಳ ಕಟ್ಟಗಳಿಗೂ ಹಾನಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ.
ಇನ್ನು ಅವಘಡ ಸಂಬಂವಿಸುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ 5 ಅಗ್ನಿಶಾಮಕ ವಾಹನ ಬೆಂಕಿ ನಂದಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.