ಉದಯಂಪುರಂ, ಡಿ.26 (DaijiworldNews/PY): "ಮಾನವೀಯತೆಯ ಸೇವೆ ಮಾಡುವ ಧರ್ಮವನ್ನು ಕಂಡಾಗ ಜನರು ಮತಾಂತರಗೊಳ್ಳುತ್ತಾರೆಯೇ ಹೊರತು ಭಯದಿಂದ ಅಲ್ಲ" ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಉದಯಂಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜನರನ್ನು ಯಾರಾದರೂ ಮತಾಂತರ ಮಾಡುತ್ತಿದ್ದರೆ ಕತ್ತಿಯನ್ನು ಬಳಸುತ್ತಿಲ್ಲ. ಅದು ವ್ಯಕ್ತಿಗಳು ಒಳ್ಳೆಯ ಕಾರ್ಯ ಹಾಗೂ ಅವರ ಪಾತ್ರ ಮತಾಂತರಕ್ಕೆ ಪ್ರಭಾವಿಸುತ್ತದೆ" ಎಂದಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಲು ರಾಜ್ಯದಲ್ಲಿ ಮತಾಂತರ ವಿರೋಧ ಮಸೂದೆಯನ್ನು ಪ್ರಸ್ತಾಪಿಸಲಾಗುತ್ತಿದೆ. ಇದಕ್ಕೆ ಪ್ರತಿಪಕ್ಷಗಳು ಆರೋಪಿಸಿದ ಬಳಿಕ ಗುಲಾಂ ನಬಿ ಆಜಾದ್ ಅವರು ಈ ಹೇಳಿಕೆ ನೀಡಿದ್ಧಾರೆ.