ಬೆಂಗಳೂರು, ಡಿ.26 (DaijiworldNews/PY): "ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ನಾಡಿನ ಸಿಎಂ ಆಗಲಿ" ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದ್ದಾರೆ.
ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರ ಆತ್ಮಕಥನ ಯರಬೇವು ಬಿಡುಗಡೆ ಕಾರ್ಯಕ್ರಮದಲ್ಲಿ ಹಂಸಲೇಖ ಅವರು ಮಾತನಾಡಿದ ಅವರು, "ಧರ್ಮೋಕ್ರಸಿ ಬದಿಗೆ ಸರಿಸಿ, ಡೆಮೊಕ್ರಸಿಯನ್ನು ಉಳಿಸಲಿ. ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗಿ ಡೆಮೊಕ್ರಸಿ ಉಳಿಸಲಿ" ಎಂದಿದ್ದಾರೆ.
"ನಾನು ಭಯಪಡುವವನಲ್ಲ. ಮಾಗಡಿ ರೋಡ್ನಲ್ಲಿ ಆಟವಾಡಿ ಬೆಳೆದವನು ನಾನು. ನನಗೆ ಈಗ 70 ವರ್ಷ. ತಿನ್ನುವುದು ಒಪ್ಪತ್ತು. ಯರೇಬೇವು ಪುಸ್ತಕ ದೇಸಿ ಸಮುದಾಯದ ಕರುಳಿನ ಕಥೆಯಾಗಿದೆ. ನಮ್ಮದು ಅದೇ ರೀತಿಯ ಕರುಳಿನ ಕಥೆಯಾಗಿದೆ" ಎಂದು ತಿಳಿಸಿದ್ದಾರೆ.
"ಇತ್ತೀಚೆಗೆ ಒಂದು ವಿಚಾರದಲ್ಲಿ ತಿಳಿಯದ ಸಮುದಾಯಗಳೆಲ್ಲಾ ಬೆಂಬಲ ನೀಡಿದವು. ಈ ರೀತಿ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಬೆಂಬಲಕ್ಕೆ ನಿಂತವರು ಎಸ್ ಜಿ ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭ ನನ್ನ ದೇಶಿ ಶಾಲೆಗೆ ಸಹಯಾ ಮಾಡಿದ್ದರು ಎಂದಿದ್ದಾರೆ.