ನವದೆಹಲಿ, ಡಿ. 26 (DaijiwoldNews/HR): ಒಮಿಕ್ರಾನ್ ನಮ್ಮ ಬಾಗಿಲುಗಳನ್ನು ತಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಲು ನಾಗರಿಕರಾಗಿ ನಮ್ಮ ಪ್ರಯತ್ನವು ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಾಸಿಕ ರೇಡಿಯೊ ಮನ್ ಕಿ ಬಾತ್' ಕಾರ್ಯಕ್ರಮದ 84ನೇ ಸಂಚಿಕೆ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, "ಕೊರೊನಾ ಸಾಂಕ್ರಾಮಿಕದ ಮಧ್ಯೆ ಭಾರತವು ಕುಟುಂಬವಾಗಿ ಒಟ್ಟಿಗೆ ನಿಂತಿರುವುದಕ್ಕೆ ಶ್ಲಾಘಿಸಿದ ಅವರು, ಸಾಂಕ್ರಾಮಿಕತೆಯ ನಡುವೆ ಭಾರತವು ಕುಟುಂಬವಾಗಿ ಒಟ್ಟಿಗೆ ನಿಂತಿದೆ" ಎಂದರು.
ಇನ್ನು ದೇಶದ ವಿಜ್ಞಾನಿಗಳು ಹೊಸ ಒಮಿಕ್ರಾನ್ ರೂಪಾಂತರವನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದು, ಪ್ರತಿದಿನ ಅವರು ಹೊಸ ಡೇಟಾವನ್ನು ಪಡೆಯುತ್ತಿದ್ದಾರೆ, ಅವರ ಸಲಹೆಗಳಿಂದ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.
"ಸ್ವಯಂ-ಅರಿವು ಮತ್ತು ಸ್ವಯಂ-ಶಿಸ್ತು ಕೊರೊನಾ ವಿರುದ್ಧದ ಶಕ್ತಿಯಾಗಿದ್ದು, ನಮ್ಮ ಸಾಮೂಹಿಕ ಶಕ್ತಿ ಮಾತ್ರ ಕೊರೊನಾ ಸೋಂಕನ್ನು ಸೋಲಿಸುತ್ತದೆ. ಈ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ನಾವು 2022 ಕ್ಕೆ ಪ್ರವೇಶಿಸಬೇಕಾಗಿದೆ" ಎಂದು ಹೇಳಿದ್ದಾರೆ.