ತೆಲಂಗಾಣ, ಡಿ.26 (DaijiworldNews/PY): ಸಿಆರ್ಪಿಎಫ್ನಲ್ಲಿ ಕೆಲಸ ಮಾಡುತ್ತಿದ್ದ ಯೋಧನೋರ್ವ ತನ್ನ ಮೇಲಾಧಿಕಾರಿಗೆ ಗುಂಡು ಹಾರಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ವೆಂಕಟಾಪುರಂ ಎಂಬ ಹಳ್ಳಿಯಲ್ಲಿದ್ದ ವೆಂಕಟಾಪುರಂ ಮಂಡಲ ಕೇಂದ್ರ 39 ಬೆಟಾಲಿಯನ್ನಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಜಿಲ್ಲಾ ಎಸ್ಪಿ ಸಂಗ್ರಾಮ್ ಸಿಂಗ್ ಮಾಹಿತಿ ನೀಡಿದ್ದಾರೆ.
ಸಿ.ಆರ್.ಪಿ.ಎಫ್. ನಲ್ಲಿ ಕೆಲಸ ಮಾಡುತ್ತಿದ್ದ ಯೋಧನೊಬ್ಬ ತನ್ನ ಮೇಲಾಧಿಕಾರಿಗೆ ಗುಂಡು ಹಾರಿಸಿ ಆ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಯಾವುದೋ ಕಾರಣಕ್ಕೆ ಸಿಆರ್ಪಿಎಫ್, ಎಸ್ಐ ಉಮೇಶ್ ಹಾಗೂ ಯೋಧ ಸ್ಟೀಫನ್ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕೋಪದಲ್ಲಿದ್ದ ಸ್ಟೀಫನ್ ತನ್ನ ಬಳಿ ಇದ್ದ ಗನ್ನಿಂದ ಎಸ್ಐ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಅದೇ ಗನ್ನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಗುಂಡು ಹಾರಿಸುತ್ತಿದ್ದಂತೆ ಎಸ್ಐ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.