ನವದೆಹಲಿ, ಡಿ. 26 (DaijiwoldNews/HR): ದೇಶಾದ್ಯಂತ ಓಮಿಕ್ರಾನ್ನ ವೇಗವು ನಿರಂತರವಾಗಿ ಹೆಚ್ಚುತ್ತಿದ್ದು, ಇಲ್ಲಿಯವರೆಗೆ ದೇಶದ ಒಟ್ಟು 17 ರಾಜ್ಯಗಳಲ್ಲಿ ಓಮಿಕ್ರಾನ್ ಹರಡಿ ಸೋಂಕಿತರ ಸಂಖ್ಯೆ 438ಕ್ಕೆ ಏರಿಕೆಯಾಗಿದೆ.
ರಾಜಸ್ಥಾನದಲ್ಲಿ ಒಂದು ದಿನದಲ್ಲಿ 21 ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 108, ದೆಹಲಿಯಲ್ಲಿ 79, ಗುಜರಾತ್ನಲ್ಲಿ 43, ರಾಜಸ್ಥಾನದಲ್ಲಿ 43, ತೆಲಂಗಾಣದಲ್ಲಿ 38, ಕೇರಳದಲ್ಲಿ 38, ತಮಿಳುನಾಡಿನಲ್ಲಿ 34 ಮತ್ತು ಕರ್ನಾಟಕದಲ್ಲಿ 31 ಪ್ರಕರಣಗಳು ದಾಖಲಾಗಿವೆ.
ಇನ್ನು ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್ ಸೋಂಕನ್ನು ತಡೆಯಲು ಸಾಧ್ಯವಿಲ್ಲ ಎಂದು ದೇಶದಲ್ಲಿಕೊರೊನಾ ಕುರಿತು ವೈದ್ಯರ ತಜ್ಞರ ಸಮಿತಿ ಎಚ್ಚರಿಸಿದ್ದು, ಪ್ರತಿ ಎರಡು ದಿನಗಳಿಗೊಮ್ಮೆ ಹೊಸ ರೂಪಾಂತರಗಳ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ದೇಶದಲ್ಲಿ ಮೂರನೇ ಅಲೆಯು ಜನವರಿಯಲ್ಲಿ ಪ್ರಾರಂಭವಾಗಬಹುದು ಎಂದು ಎಚ್ಚರಿಸಿದ್ದಾರೆ.