ಜಮ್ಮು, ಡಿ.26 (DaijiworldNews/PY): ಭಾರತೀಯ ಸೇನಾಪಡೆ ಜಮ್ಮು-ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಸದೆಬಡೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಉಗ್ರನನ್ನು ಕಡಿಪೋರಾ ಪ್ರದೇಶದ ನಿವಾಸಿ ಫಹೀಂ ಭಟ್ ಎಂದು ಗುರುತಿಸಲಾಗಿದೆ. ಈತ ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು ಆಯಂಡ್ ಕಾಶ್ಮೀರ್ಗೆ ಸೇರಿದ ಉಗ್ರ ಎನ್ನಲಾಗಿದೆ.
ಸೇನಾಪಡೆಯು, ಅನಂತ್ನಾಗ್ ಜಿಲ್ಲೆಯ ಶ್ರೀಗುಫ್ವಾರ ಎನ್ನುವ ಪ್ರದೇಶದಲ್ಲಿ ಎನ್ಕೌಂಟರ್ ನಡೆಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಮೃತ ಉಗ್ರ ಬಿಜ್ಬೆಹರಾ ಪೊಲೀಸ್ ಠಾಣೆಯ ಎಎಸ್ಐ ಮೊಹಮ್ಮದ್ ಅಶ್ರಫ್ ಹತ್ಯೆಯಲ್ಲಿ ಭಾಗಿಯಾಗಿದ್ದ" ಎಂದು ಕಾಶ್ಮೀರ ಪೊಲೀಸ್ ಇನ್ಸ್ಪೆಕ್ಟರ್-ಜನರಲ್ ಮಾಹಿತಿ ನೀಡಿದ್ದಾರೆ.