ಚಂಡೀಗಢ, ಡಿ. 25 (DaijiworldNews/HR): ನಾನೊಂದು ಅವಾಜ್ ಹಾಕಿದ್ರೆ ಪೊಲೀಸ್ರು ಪ್ಯಾಂಟ್ ಒದ್ದೆ ಮಾಡ್ಕೊತಾರೆ ಎಂದಿದ್ದ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ದೂರು ದಾಖಲಾಗಿದೆ.
ಪೊಲೀಸರ ವಿರುದ್ಧ ಸಿಧು ಅವಾಚ್ಯ ಪದ ಬಳಕೆ ಮಾಡಿದ್ದು, ಈ ಹಿನ್ನೆಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಇನ್ನು ನಾನೊಂದು ಅವಾಜ್ ಹಾಕಿದ್ರೆ ಪೊಲೀಸರು ಪ್ಯಾಂಟ್ ಒದ್ದೆ ಮಾಡ್ಕೊತಾರೆ ಎಂದಿದ್ದ ಸಿಧು ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.