ಕೋಲಾರ, ಡಿ. 25 (DaijiworldNews/HR): ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಬಂದ್ ಮಾಡಿದರೆ ಯಾವ ಪ್ರಯೋಜನ ಆಗುವುದಿಲ್ಲ.ರಾಜ್ಯ ಬಂದ್ ಮಾಡುವುದರಿಂದ ಏನಾದರೂ ಪ್ರಯೋಜನ ಆಗುವಂತಿದ್ದರೆ ಮಾತ್ರ ಬಂದ್ ಮಾಡಬೇಕು ಎಂದು ನಟ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕನ್ನಡಪರ ಸಂಘಟನೆಗಳ ಮುಖಂಡರು ಬಂದ್ ಘೋಷಣೆ ಮಾಡಿದ್ದು, ನಾನೂ ಅವರ ಜತೆ ನಿಂತುಕೊಳ್ಳುತ್ತೇನೆ. ಆದರೆ ಬಂದ್ನಿಂದ ಪರಿವರ್ತನೆ ಆಗಬೇಕು. ಸುಮ್ಮನೆ ಬಂದ್ ಮಾಡಿದರೆ ಏನೂ ಪ್ರಯೋಜನವಿಲ್ಲ" ಎಂದರು.
ಇನ್ನು "ಕೋಲಾರ ನಮ್ಮ ಕುಟುಂಬಕ್ಕೆ ಹತ್ತಿರವಾಗಿರುವ ಜಿಲ್ಲೆಯಾಗಿದ್ದು, ಬಹಳಷ್ಟು ಮಂದಿ ನಮ್ಮನ್ನು ಈ ಭಾಗದಲ್ಲಿ ಬೆಳೆಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲೂ ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ ಜಿಲ್ಲೆ ಮೇಲೆ ನಮಗೂ ಹೆಚ್ಚಿನ ಅಭಿಮಾನವಿದೆ" ಎಂದು ತಿಳಿಸಿದದ್ದಾರೆ.