ಉತ್ತರಪ್ರದೇಶ, ಡಿ.25 (DaijiworldNews/PY): ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ಆಕೆಯ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆ ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆದಿದೆ.
ಸೂಕ್ತ ಮಾಹಿತಿಯ ಮೇರೆಗೆ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದು, ವಿಚಾರಣೆ ನಡೆದಿದ್ದಾರೆ. ಬಂಧಿತ ಯುವಕರನ್ನು ಶಂಶೇರ್ ಹಾಗೂ ಫೈಜಲ್ ಎಂದು ಗುರುತಿಸಲಾಗಿದೆ.
"ನನ್ನ ಮಗಳಿಗೆ ಈಗ 12 ವರ್ಷ. ಆದರೆ, ಪೊಲೀಸರು 14 ಎಂದು ನಮೂದಿಸಿಕೊಂಡಿದ್ದಾರೆ. ಎಫ್ಐಆರ್ನ ಪ್ರಕಾರ ಶಂಶೇರ್ ಅಲಿ ಎಂಬಾತ ನನ್ನ ಮಗಳನ್ನು ಅರೈಲ್ ಎನ್ನುವ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆತನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆಯ ಸಂದರ್ಭ ಶಂಶೇರ್ ತಾನು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದನ್ನು ಒಪ್ಪಿಕೊಂಡಿದ್ದಾನೆ. ಫೈಜಲ್ ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿದ್ದಾಗಿ ಹೇಳಿದ್ದಾನೆ" ಎಂದು ಸಂತ್ರಸ್ತೆಯ ತಂದೆ ತಿಳಿಸಿದ್ದಾರೆ.
ಅತ್ಯಾಚಾರದ ನಂತರ ಫೈಜಲ್ ಬಾಲಕಿಗೆ ಅತ್ಯಾಚಾರದ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಪದೇ ಪದೇ ಬಾಲಕಿಗೆ ಕರೆ ಮಾಡುತ್ತಿದ್ದ ಫೈಜಲ್ ಆಕೆಗೆ ಬೆದರಿಸುತ್ತಿದ್ದ ಎನ್ನಲಾಗಿದೆ. ಒಮ್ಮೆ ಬಾಲಕಿಯ ಅಣ್ಣ ಫೋನ್ ಕೈಗೆತ್ತಿಕೊಂಡ ವೇಳೆ ಈ ಘಟನೆಯ ಬಗ್ಗೆ ಬಾಲಕಿ ಮಾಹಿತಿ ನೀಡಿದ್ಧಾಳೆ. ನಂತರ ಬಾಲಕಿಯ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.