ದಾವಣಗೆರೆ,ಡಿ. 25 (DaijiworldNews/HR): ಈ ಹಿಂದೆ ಇದ್ದ ಯಾವುದೇ ಮುಖ್ಯಮಂತ್ರಿಗಳು ಹೆಚ್ಚು ಕೋಮುವಾದಿಗಳಾಗಿರಲಿಲ್ಲ. ಆದರೆ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚು ಕೋಮುವಾದಿಗಳಾಗಿದ್ದಾರೆ ಎಂದು ನಟ ಚೇತನ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿ ನೀತಿಯಾಗಿದ್ದು, ಜನರು ಅವರಿಗೆ ಬೇಕಾದ ಧರ್ಮಕ್ಕೆ ಸೇರಬಹುದು ಎನ್ನುವುದು ಸಂವಿಧಾನದಲ್ಲಿದೆ. ಹೀಗಿದ್ದೂ ಇದರ ಮೇಲೆ ನಿರ್ಬಂಧ ಹೇರಲು ರಾಜ್ಯ ಸರ್ಕಾರ ಹೊರಟಂತಿದೆ" ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇನ್ನು "ಬಸವರಾಜ ಬೊಮ್ಮಾಯಿಯವರ ತಂದೆ ಬೊಮ್ಮಾಯಿಯವರು ಒಳ್ಳೆಯ ಪ್ರಗತಿಪರ ಸಿಎಂ ಆಗಿದ್ದವರು. ಆದರೆ ಸಿಎಂ ಬೊಮ್ಮಾಯಿಯವರು ಮಾತ್ರ ಯಾವ ಸಿಎಂಗೆ ಇಲ್ಲದಷ್ಟು ಕೋಮುವಾದಿಯಾಗಿದ್ದಾರೆ" ಎಂದು ಕಿಡಿಕಾರಿದ್ದಾರೆ.