ತುಮಕೂರು, ಡಿ. 25 (DaijiworldNews/HR): ಎಸ್.ಸಿ, ಎಸ್.ಟಿ ಸಮುದಾಯದವರು ಮತಾಂತರವಾದರೆ ಮತಾಂತರ ಆದ ಬಳಿಕ ಅವರಿಗೆ ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನು ನಿಲ್ಲಿಸಲಾಗುತ್ತದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮತಾಂತರವಾದವರು ಎಸ್.ಸಿ, ಎಸ್.ಟಿ ಆಗಿದ್ದರೇ ಮತಾಂತರ ಬಳಿಕ ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನ ನಿಲ್ಲಿಸಲಾಗುತ್ತದೆ. ಈವರೆಗೆ ಮತಾಂತರ ಆದವರ ಮಾಹಿತಿ ಸರ್ಕಾರದ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಾಗಬೇಕು" ಎಂದರು.
ಇನ್ನು "ಮಂತಾರವಾದವರ ಬಗ್ಗೆ ಮತಾಂತರ ಮಾಹಿತಿ ಸರ್ವಿಸ್ ಹಿಸ್ಟರಿಗೆ ಎಂಟ್ರಿಯಾಗಬೇಕು. ಮಕ್ಕಳ ಬರ್ತ್ ಸರ್ಟಿಫಿಕೆಟ್, ಶಾಲಾ ದಾಖಲಾತಿಗಳಲ್ಲಿ ಮತಾಂತರವಾಗಿರುವ ಬಗ್ಗೆ ಮಾಹಿತಿ ದಾಖಲು ಮಾಡಬೇಕು" ಎಂದಿದ್ದಾರೆ.
"ಕೆಲವು ಸ್ವಯಂಪ್ರೇರಿತರಾಗಿ ಮತಾಂತರವಾಗುತ್ತಾರೆ. ಅದಕ್ಕೆ ನಮ್ಮ ಅಡ್ಡಿಯಿಲ್ಲ. ಜನವರಿಯಲ್ಲಿ ವಿಧಾನ ಪರಿಷತ್ನಲ್ಲಿಯೂ ಮತಾಂತರ ನಿಷೇಧ ಕಾಯ್ದೆಯ ವಿಧೇಯಕ ಮಂಡಿಸುತ್ತೇವೆ" ಎಂದು ಹೇಳಿದ್ದಾರೆ.