ಹಾಸನ, ಡಿ 24 (DaijiworldNews/MS): ಹೆಚ್.ಡಿ.ದೇವೇಗೌಡ ಪ್ರಧಾನಿ ಪದವಿಗೆ ಏರಲು ಕಾಂಗ್ರೆಸ್ ಪಕ್ಷ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, "ರಾಜಕಾರಣದಲ್ಲಿ ಗೆಲುವು ಸೋಲು ಸಾಮಾನ್ಯ , ದೇವೇಗೌಡರನ್ನು ಪ್ರಧಾನಿ ಮಾಡಲು ಕಾಂಗ್ರೆಸ್ ಪಕ್ಷವೇ ಕಾರಣ. ರಾಜಕಾರಣದ ಇತಿಹಾಸದಲ್ಲಿ ಇಂಥ ಘಟನೆಗಳು ಬಹಳಷ್ಟು ಆಗಿದೆ. ನಾವು ಸರಿಯಾಗಿ ಅಧಿಕಾರ ನಡೆಸಲಿಲ್ಲ ಎಂದು ಸೋಲಿಸಿದರು, ನಾನು ಸೋತಿದ್ದೇನೆ. ಹಾಸನದಲ್ಲಿ ದೇವೇಗೌಡರು, ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡ ಎಲ್ಲರೂ ರಾಜಕಾರಣ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ಮೇಕೆದಾಟು ವಿಚಾರವಾಗಿ ಮಾತನಾಡಿದ ಅವರು ಮೇಕೆದಾಟು ಪಾದಯಾತ್ರೆಯ ಸಭೆಯಲ್ಲಿ ಇಷ್ಟು ಜನ ನಮಗೆ ಉತ್ಸಾಹ ತೋರಿಸುತ್ತಿರುವುದನ್ನು ನೋಡಿದರೆ ಇಡೀ ದೇಶ, ರಾಜ್ಯದಲ್ಲಿ ಬದಲಾವಣೆ ಕಾಣುತ್ತಿದೆ. ಬೆಂಗಳೂರಿನಿಂದ ಮೇಕೆದಾಟುವರೆಗೂ ಪಾದಯಾತ್ರೆ ಮಾಡುತ್ತಿದ್ದೇವೆ. ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಜನ ಬಯಸಿದ್ದಾರೆ. ಎಲ್ಲಾ ವರ್ಗದ ಜನರನ್ನು ರಕ್ಷಣೆ ಮಾಡುವಂತ ಕೆಲಸವನ್ನು ಮಾಡುತ್ತೇವೆ" ಎಂದಿದ್ದಾರೆ.