ತೆಲಂಗಾಣ, ಡಿ.25 (DaijiworldNews/PY): ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಂದೆ ನೇಣಿಗೆ ಶರಣಾದ ಘಟನೆ ತೆಲಂಗಾಣದ ನಲ್ಲಗೊಂಡ ಜಿಲ್ಲೆಯಲ್ಲಿ ನಡೆದಿದೆ.
ನುನಾವತ್ ಗ್ಯಾಂಗ್ನ ಕಿಶನ್ ನಾಯಕ್ ಎನ್ನುವವರ ಜಮೀನಿನಲ್ಲಿ ಕಿಶನ್ ಹಾಗೂ ಮಕ್ಕಳಾದ ಹರ್ಷವರ್ಧನ್ (8) ಹಾಗೂ ಅಖಿಲ್ (6) ಮೃತದೇಹಗಳು ಪತ್ತೆಯಾಗಿವೆ.
ತಂಪು ಪಾನೀಯದಲ್ಲಿ ಕೀಟನಾಶಕ ಬೆರೆಸಿ ಮಕ್ಕಳನ್ನು ಕೊಂದು ಬಳಿಕ ಕಿಶನ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಸ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಕೌಟುಂಬಿಕ ಕಲಹದ ಕಾರಣದಿಂದ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.