ಜೈಪುರ,ಡಿ 24 (DaijiworldNews/MS): ಭಾರತೀಯ ವಾಯುಪಡೆಗೆ ಸೇರಿದ ಯುದ್ಧವಿಮಾನವೊಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿ ಪತನಗೊಂಡಿದ್ದು, ಇದರ ಪರಿಣಾಮ ಪೈಲೆಟ್ ಹರ್ಷಿತ್ ಸಿನ್ಹಾ ದುರಂತ ಸಾವನ್ನಪ್ಪಿದ್ದಾರೆ.
ಶುಕ್ರವಾರ ಸಂಜೆ ಭಾರತೀಯ ವಾಯುಪಡೆಯ ಮಿಗ್-21 ವಿಮಾನವು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ತರಬೇತಿ ಪಡೆಯುತ್ತಿದ್ದಾಗ ರಾತ್ರಿ 8:30ರ ಸುಮಾರಿಗೆ ಪತನಗೊಂಡಿದೆ.
ರಾಷ್ಟ್ರೀಯ ಉದ್ಯಾನವನ ಪ್ರದೇಶದ ಬಳಿ ಇರುವ ಮರುಭೂಮಿಯಲ್ಲಿ ಈ ವಿಮಾನ ಅಪಘಾತ ಸಂಭವಿಸಿದೆ ಎಂದು ಜೈಸಲ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.
'ಇಂದು ಸಂಜೆ ನಡೆದ ವಿಮಾನ ಅಪಘಾತದಲ್ಲಿ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಅವರ ದುಃಖದ ನಿಧನವನ್ನು ತೀವ್ರ ದುಃಖದಿಂದ ಐಎಎಫ್ ತಿಳಿಸುತ್ತದೆ ಮತ್ತು ಧೈರ್ಯಶಾಲಿಗಳ ಕುಟುಂಬದೊಂದಿಗೆ ದೃಢವಾಗಿ ನಿಂತಿದೆ' ಎಂದು ಐಎಎಫ್ ಟ್ವೀಟ್ ಮಾಡಿದೆ.