ನವದೆಹಲಿ, ಡಿ.25 (DaijiworldNews/PY): ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕ್ರಿಸ್ಮಸ್ ಶುಭಾಶಯ ಕೋರಿದ್ದಾರೆ.
ಟ್ವೀಟ್ ಮೂಲಕ ಶುಭ ಕೋರಿರುವ ಅವರು, "ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಸೇವೆ, ದಯೆ ಹಾಗೂ ನಮ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಏಸು ಕ್ರಿಸ್ತನ ಜೀವನ ಹಾಗೂ ಉದಾತ್ತ ಬೋಧನೆಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ. ಎಲ್ಲರು ಆರೋಗ್ಯವಂತರಾಗಿ ಹಾಗೂ ಸಮೃದ್ದರಾಗಿ" ಎಂದಿದ್ದಾರೆ.
"ಪ್ರಜೆಗಳಿಗೆ, ವಿಶೇಷವಾಗಿ ಕ್ರಿಶ್ಚಿಯನ್ ಸಹೋದರ, ಸಹೋದರಿಯರಿಗೆ ಕ್ರಿಸ್ಮಸ್ನ ಶುಭಾಶಯಗಳು. ಈ ಸಂತಸದ ಸಮಯದಲ್ಲಿ ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಆಧರಿಸಿದ ಸಮಾಜವನ್ನು ನಿರ್ಮಿಸಲು ಮತ್ತು ನಮ್ಮ ಜೀವನದಲ್ಲಿ ಏಸು ಕ್ರಿಸ್ತನ ಬೋಧನೆಗಳನ್ನು ಅಳವಡಿಸಿಕೊಳ್ಳಲು ಸಂಕಲ್ಪ ಮಾಡೋಣ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದು, "ಕ್ರಿಸ್ಮಸ್ ಹಬ್ಬವು ನಮ್ಮ ಸಮಾಜದಲ್ಲಿ ಏಕತೆ ಹಾಗೂ ಭ್ರಾತೃತ್ವದ ಬಾಂಧವ್ಯವನ್ನು ಬಲಪಡಿಸಲಿ" ಎಂದಿದ್ದಾರೆ.