ಬೆಳಗಾವಿ, ಡಿ.24 (DaijiworldNews/PY): "ನಾಡುನುಡಿ, ಜಲ, ಕನ್ನಡಿಗರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಿದೆ" ಎಂದು ಜಲಸಂಪನ್ಮೂಲ ಸಚಿವ ಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
"ನಾಡಿನ ಭಾಷೆ, ನೆಲ-ಜಲ ವಿಚಾರದಲ್ಲಿ ಯಾರೊಂದಿಗೂ ನಾವು ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕನ್ನಡಿಗರ ಹಿತಾಸಕ್ತಿ ಕಾಪಾಡಲಿ ಸರ್ಕಾರ ಎಂದಿಗೂ ಬದ್ದ" ಎಂದಿದ್ಧಾರೆ.
"ಪ್ರತಿ ಅಧಿವೇಶನ ನಡೆಯುವ ಸಂದರ್ಭ ಕೆಲ ಕಿಡಿಗೇಡಿಗಳು ಭಾಷೆ ಹಾಗೂ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲು ಯತ್ನಿಸುತ್ತಿದ್ದಾರೆ. ಅಂತವರಿಗೆ ಸರಿಯಾದ ಪಾಠ ಕಲಿಸಲು ನಮ್ಮ ಸರ್ಕಾರ ಬದ್ದ" ಎಂದು ಹೇಳಿದ್ಧಾರೆ.
"ಇತ್ತೀಚೆಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಹಾಕಿದ್ದೇವೆ. ಅವರಿಗೆ ಕಠಿಣವಾದ ಶಿಕ್ಷೆ ಸಹ ನೀಡಲಿದ್ದೇವೆ. ನಮ್ಮ ನಾಡು, ನುಡಿ, ನೆಲ ಜಲ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದಿದ್ದಾರೆ.
"ಎಂಇಎಸ್ ಪುಂರು ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟು, ಮುಖ್ಯಮಂತ್ರಿ ಅವರ ಪ್ರತಿಕೃತಿ ದಹನ ಮಾಡಿದ್ದಾರೆ. ಅವರಿಗೆ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.