ನವದೆಹಲಿ, ಡಿ. 24 (DaijiworldNews/HR): ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣನವರು ತಮ್ಮ ಹುಟ್ಟೂರಿಗೆ ಎತ್ತಿನ ಗಾಡಿಯ ಮೇಲೆ ಆಗಮಿಸಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ರಮಣನವರ ಹುಟ್ಟೂರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಆಗಿದ್ದು, ಹಳ್ಳಿಯ ಹೊರಭಾಗದಿಂದ ಎತ್ತಿನ ಗಾಡಿ ಹತ್ತಿದ ಎನ್.ವಿ. ರಮಣ ಅವರು ತಮ್ಮ ಹೆಂಡತಿಯೊಂದಿಗೆ ಹುಟ್ಟೂರಿಗೆ ಬಂದಿದ್ದು, ಭರ್ಜರಿ ಸ್ವಾಗತ ದೊರೆತಿದೆ.
ಮುಖ್ಯ ನ್ಯಾಯಮೂರ್ತಿ ಆದಮೇಲೆ ಮೊದಲ ಬಾರಿಗೆ ತಮ್ಮ ಸ್ವಂತ ಊರಿಗೆ ಆಗಮಿಸಿದ ನ್ಯಾಯಮೂರ್ತಿಯವರನ್ನ ಸ್ವಾಗತಿಸಲು ಇಡೀ ಹಳ್ಳಿಗೆ ಹಳ್ಳಿಯೆ ಸಿದ್ಧವಾಗಿತ್ತು.
ಇನ್ನು ಜಾನಪದ ನೃತ್ಯ, ಹಾಡು ಹಾಗೂ ಸಂಗೀತ ವಾದ್ಯಗಳನ್ನ ಬಾರಿಸಿ ಮುಖ್ಯ ನ್ಯಾಯಮೂರ್ತಿಯವರಿಗೆ ಅದ್ಭುತ ಸ್ವಾಗತ ಕೋರಿದ್ದು, ಇದಕ್ಕೂ ಮೊದಲು ನ್ಯಾಯಮೂರ್ತಿಯವರು ಜಿಲ್ಲೆಯ ಗಡಿಗೆ ಆಗಮಿಸಿದಾಗ ಜಿಲ್ಲಾಧಿಕಾರಿ, ಪೊಲೀಸ್ ಉನ್ನತಾಧಿಕಾರಿ ಹಾಗೂ ಸ್ಥಳೀಯ ರಾಜಕೀಯ ನಾಯಕರು ಅವರ ಸ್ವಾಗತ ಕೋರಿದ್ದರು.