ನವದೆಹಲಿ, ಡಿ. 24 (DaijiworldNews/HR): ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ವೀಡಿಯೊಗಳನ್ನು ಕಳುಹಿಸಿ ನನಗೆ ಕೆಲವರು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಆರೋಪಿಸಿದ್ದು, ಐವರು ಬಿಪಿಒ ಕೆಲಸಗಾರರನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನನ್ನ ಬಳಿ ದೋಷಾರೋಪಣೆಯ ವೀಡಿಯೊಗಳು ಇವೆ ಎಂದು ಹೇಳಿಕೊಂಡು ಕೋಟ್ಯಂತರ ರೂ. ಗಳನ್ನು ಸುಲಿಗೆ ಮಾಡಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.
ಇನ್ನು ಹಣಕ್ಕಾಗಿ ದೂರವಾಣಿ ಕರೆಗಳು ಬಂದಿವೆ ಎಂದು ಸಚಿವರ ಸಿಬ್ಬಂದಿಯಿಂದ ನಾವು ದೂರನ್ನು ಸ್ವೀಕರಿಸಿದ್ದು, ನವದೆಹಲಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.