ಕೇರಳ, ಡಿ. 24 (DaijiworldNews/HR): ಆನ್ಲೈನ್ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಜೋಡಿಯೊಂದು ಕೋರ್ಟ್ ಮೆಟ್ಟಿಲೇರಿದ್ದು, ಅದಕ್ಕೆ ಕೇರಳ ಹೈಕೋರ್ಟ್ ಅಸ್ತು ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ
ರಿಂತು ತಾಮಸ್ ಮತ್ತು ಅನಂತ ಹರಿಕೃಷ್ಣ ಎಂಬುವವರು ಮದುವೆಯಾಗಲು ನಿಶ್ಚಯ ಮಾಡಿಕೊಂಡಿದ್ದು, ಬಳಿಕ ಅನಂತ ಹರಿಕೃಷ್ಣ ಇಂಗ್ಲೆಂಡ್ ನಲ್ಲಿ ವಿಧ್ಯಾಭ್ಯಾಸಕ್ಕೆಂದು ಹೋಗಿದ್ದಾರೆ. ಡಿಸೆಂಬರ್ 23 ಕ್ಕೆ ಇವರಿಬ್ಬರ ಮದುವೆ ನಿಶ್ಚಯವಾಗಿತ್ತು. ಅದರಂತೆ ಅನಂತ ಹರಿಕೃಷ್ಣ ನಾಯರ್ ವಿಮಾನದ ಟಿಕೆಟ್ ನ್ನ 22ಕ್ಕೆ ಬುಕ್ ಮಾಡಿದ್ದರು. ಆದರೆ ಈ ಒಮಿಕ್ರಾನ್ ಹೆಚ್ಚಳದಿಂದ ಅವರು ಭಾರತಕ್ಕೆ ಬರಲು ಅಸಾಧ್ಯವಾಗಿದೆ.
ಇನ್ನು ನಿಗಧಿಯಂತೆ ಮದುವೆಯಾಗಲು ಸಾಧ್ಯವಾಗಿಲ್ಲ. ಈ ಜೋಡಿ ಆನ್ಲೈನ್ ಮದುವೆ ಬಗ್ಗೆ ಯೋಚಿಸಿ ಬಳಿಕ ಕೇರಳ ಹೈಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಜೋಡಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಆನ್ಲೈನ್ ಮದುವೆಗೆ ಒಪ್ಪಿಗೆ ನೀಡಿದೆ.