ಬೆಂಗಳೂರು, ಡಿ. 24 (DaijiworldNews/HR): ರಾಜ್ಯದಲ್ಲಿ ಕೆಎಸ್ಆರ್ಟಿಸಿ ಖಾಸಗೀಕರಣ ಮಾಡುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, "ಕೆಎಸ್ಆರ್ಟಿಸಿ ಖಾಸಗೀಕರಣ ಮಾಡುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಇದೊಂದು ಸೇವೆ ನೀಡುವ ಸಂಸ್ಥೆಯಾಗಿದ್ದು, ಲಾಭ-ನಷ್ಟವನ್ನು ಗಮನಿಸದೆ ರಾಜ್ಯದಲ್ಲಿ ಸಾರಿಗೆ ಸೇವೆ ಒದಗಿಸಲಿದೆ" ಎಂದರು.
ಕೆಎಸ್ಆರ್ಟಿಸಿ ಖಾಸಗೀಕರಣಗೊಳಿಸಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದೇ ಕಾರಣದಿಂದಾಗಿ ಅನೇಕ ನೌಕರರು ಆತಂಕಕ್ಕೂ ಒಳಗಾಗಿದ್ದರು. ಆದರೆ ಕೆಎಸ್ಆರ್ಟಿಸಿಯನ್ನು ಖಾಸಗೀಕರಣ ಮಾಡೋ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ" ಎಂದಿದ್ದಾರೆ.
ಇನ್ನು ರಾಜ್ಯ ಸಾರಿಗೆ ನಿಗಮ ಕಳೆದ ಐದು ವರ್ಷದಲ್ಲಿ 233.10 ಕೋಟಿ ಸಾಲ ಮಾಡಿದ್ದು, ಅದರಲ್ಲಿ 195 ಕೋಟಿ ಸಾಲ ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.