ಮುಂಬೈ, ಡಿ.24 (DaijiworldNews/PY): ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾಗೂ ಗಾಯಕಿ ಕನ್ನಿಕಾ ಕಪೂರ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಹೊಸ ಹಾಡು ಮಧುಬನ ಬಿಡುಗಡೆಯಾಗಿದೆ. ಆದರೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸನ್ನಿ ಲಿಯೋನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ಧಾರೆ.
ಎರಡು ದಿನಗಳ ಹಿಂದೆ ಈ ಹಾಡು ಬಿಡುಗಡೆಯಾಗಿದ್ದು ಸಖತ್ ವೀಕ್ಷಣೆ ಕಾಣುತ್ತಿದ್ದ, 7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ಶರೀಬ್ ಮತ್ತು ತೋಶಿ ಸಂಗೀತ ನೀಡಿರುವ ಈ ಹಾಡನ್ನು ಬಾಲಿವುಡ್ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ನಿರ್ದೇಶಿಸಿದ್ದಾರೆ.
"ಸನ್ನಿ ಲಿಯೋನ್ ಕುಣಿತದ ಮಧುಬನ್ ಹಾಡಿನಲ್ಲಿ ರಾಧೆಗೆ ಅವಮಾನ ಮಾಡಲಾಗಿದೆ. ಅಲ್ಲದೇ, ಪವಿತ್ರ ಸ್ಥಳವಾದ ಮಧುಬನ್ ಅನ್ನು ಅಣಕಿಸಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ" ಎಂದು ನೆಟ್ಟಿಗರು ಆರೋಪಿಸಿದ್ಧಾರೆ.
"ಧಾರ್ಮಿಕ ಭಾವನೆಗೆ ಧಕ್ಕೆಯಾದ ಕಾರಣ ಸನ್ನಿ ಲಿಯೋನ್ ಕ್ಷಮೆಯಾಚಿಸಬೇಕು. ಹಾಡನ್ನು ಸಂಪೂರ್ಣವಾಗಿ ನಿಷೇಧಿಸಬೇಕು" ಎಂದು ಆಗ್ರಹಿಸಿದ್ಧಾರೆ.
"ರಾಧಾ ನರ್ತಕಿಯಲ್ಲ. ಆಕೆ ಭಕ್ತೆ. ಮಧುಬನ ಪವಿತ್ರವಾದ ಸ್ಥಳವಾಗಿದೆ. ಆ ಸ್ಥಳದಲ್ಲಿ ಈ ರೀತಿಯಾದ ನೃತ್ಯವನ್ನು ಮಾಡುವುದಿಲ್ಲ. ಇದು ಹಿಂದೂ ಭಾವನೆಗೆ ಧಕ್ಕೆ ತರುವ ಯತ್ನವಾಗಿದೆ" ಎಂದು ಟ್ವೀಟ್ ಬಳಕೆದಾರರೊಬ್ಬರು ತಿಳಿಸಿದ್ದಾರೆ.