ಬೆಳಗಾವಿ, ಡಿ.24 (DaijiworldNews/PY): "ಮತಾಂತರ ನಿಷೇಧ ಕಾಯ್ದೆ ಆರ್ಎಸ್ಎಸ್ ಅಜೆಂಡಾ ಎಂದು ನಾನು ಒಪ್ಪಿಕೊಳ್ಳುತ್ತೇನೆ" ಎಂದು ಸಚಿವ ಸಿ ಎನ್ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಕಾಯ್ದೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಧಾನಸಭೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ ಪಾಸ್ ಆಗಿದೆ. ಕಾಯ್ದೆ ಬಗ್ಗೆ ಸಾಕಷ್ಟು ಚರ್ಚೆ ಆಗಿದ್ದು, ಈ ವೇಳೆ ಹಲವಾರು ವಿಚಾರಗಳು ಬೆಳಕಿಗೆ ಬಂದಿದೆ. ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿದೆ" ಎಂದಿದ್ದಾರೆ.
ಮಸೂದೆ ಆರ್ಎಸ್ಎಸ್ನ ಆಜೆಂಡಾ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್, "ಸಮಾಜದ ಪರವಾಗಿದೆ. ಹೆಚ್ಚಿನ ಸ್ಪಷ್ಟತೆ ಕೊಡುವುದಕ್ಕೆ ಈ ಕಾಯ್ದೆ ಜಾರಿಗೆ ತಂದಿದ್ದೇವೆ. ಇದು ಆರ್ಎಸ್ಎಸ್ ಅಜೆಂಡಾ ಎಂದು ನಾನು ಒಪ್ಪಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
"ಯಾವುದೇ ರೀತಿಯಾದ ಆಮಿಷಕ್ಕೆ ಒಳಗಾಗದೇ ಮತಾಂತರ ಆಗಬಾರದು. ಇದನ್ನು ಸಿದ್ದರಾಮಯ್ಯ ಅವರೇ ಜಾರಿಗೆ ತರಬೇಕು ಎಂದಿದ್ದರು. ಇದು ಸಮಾಜಕ್ಕೆ ಒಳಿತಾಗುವ ಕಾಯ್ದೆ" ಎಂದು ತಿಳಿಸಿದ್ದಾರೆ.