ಬೆಂಗಳೂರು, ಡಿ. 24 (DaijiworldNews/HR): ಅಪ್ರಾಪ್ತರನ್ನು ಬಳಸಿಕೊಂಡು ಬೈಕ್ಗಳನ್ನು ಕಳ್ಳತನ ಮಾಡಿಸ್ತಿದ್ದ ಕಾನ್ಸ್ಟೇಬಲ್ನನ್ನು ಪೊಲೀಸರು ಬಂಧಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಬಂಧಿತನ್ನು ಹೊನ್ನಪ್ಪ ಅಲಿಯಾಸ್ ರವಿ ಎಂದು ಗುರುತಿಸಲಾಗಿದೆ.
ಸಿವಿಲ್ ಕಾನ್ಸ್ಟೇಬಲ್ ಆಗಿರುವ ಹೊನ್ನಪ್ಪ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿದ್ದ ಎನ್ನಲಾಗಿದೆ.
ಇನ್ನು ಹೊನ್ನಪ್ಪ ಜತೆಗೆ ರಾಜಸ್ಥಾನದ ರಮೇಶ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರ ಬಂಧಿಸಲಾಗಿದೆ.
ಓಎಲ್ ಎಕ್ಸ್ನಲ್ಲಿ ಯಾವ ಗಾಡಿಗೆ ಬೇಡಿಕೆ ಇದೆ ಅಂತಹ ಗಾಡಿಯನ್ನೇ ಹುಡುಕಿ ಕಳ್ಳತನ ಮಾಡಿಸುತ್ತಿದ್ದು, ಅಪ್ರಾಪ್ತರು ಬೈಕ್ ಕಳ್ಳತನ ಮಾಡಿ ಹೊನ್ನಪ್ಪನಿಗೆ ತಂದು ಕೊಡುತ್ತಿದ್ದು, ಬಳಿಕ ಬೈಕ್ ಮಾರಾಟ ಮಾಡಿ ಐದರಿಂದ ಆರು ಸಾವಿರ ರೂ. ಹಣವನ್ನು ಹುಡುಗರಿಗೆ ನೀಡ್ತಿದ್ದ ಎಂದು ತಿಳಿದು ಬಂದಿದೆ.
ಇನ್ನು ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್ಗಳ ಕಳ್ಳತನ ಮಾಡಿಸುತ್ತಿದ್ದ ಆತ ತಪಾಸಣೆ ವೇಳೆ ಪೊಲೀಸರು ಗಾಡಿ ಹಿಡಿದಾಗ ಅವರಿಗೆ ಕರೆ ಮಾಡಿ ನಾನು ಪೊಲೀಸ್ ನಮ್ಮ ಕಡೆಯವರು ಬಿಡಿ ಅಂತ ಬಿಡಿಸುತ್ತಿದ್ದ. ಇದೀಗ ಪೊಲೀಸರ ಕೈಗೆ ಹೊನ್ನಪ್ಪ ಸಿಕ್ಕಿಬಿದ್ದಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.