ಚೆನ್ನೈ, ಡಿ.24 (DaijiworldNews/PY): ರಾಷ್ಟ್ರಪ್ರಶಸ್ತಿ ವಿಜೇತ ಹಾಗೂ ಮಲಯಾಳಂನ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕೆ ಎಸ್ ಸೇತುಮಾಧವನ್ (90) ಅವರು ಇಂದು ನಿಧನರಾಗಿದ್ಧಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ವಿಧಿವಶರಾಗಿದ್ದಾರೆ.
1931ರಲ್ಲಿ ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯಲ್ಲಿ ಜನಿಸಿದ ಅವರು ಕೆ ರಾಮನಾಥ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1960ರಲ್ಲಿ ಸಿಂಹಳೀಸ್ ಚಲನಚಿತ್ರ ವೀರವಿಜಯ ಮೂಲಕ ಸ್ವತಂತ್ರ ಚಲನಚಿತ್ರ ನಿರ್ಮಾಪಕರಾಗಿ ಆರಂಭಿಸಿದ ಚಿತ್ರದ ಬಳಿಕ, ತಮ್ಮ ಮೊದಲ ಮಲಯಾಣಂ ಚಿತ್ರ ಜ್ಞಾನ ಸುಂದರಿಯನ್ನು ನಿರ್ದೇಶಿಸಿದರು.
ಕರುಂ ಕರಲುಮ್ ಚಲನಚಿತ್ರದ ಮೂಲಕ ಮಲಯಾಳಂನಲ್ಲಿ ಬಾಲನಟನಾಗಿ ಹಾಗೂ ಕನ್ಯಾಕುಮಾರಿ ಚಿತ್ರದ ಮೂಲಕ ಮುಖ್ಯ ಮಾತ್ರದಲ್ಲಿ ಉಳಗನಾಯಗನ್ ಕಮಲ್ ಹಾಸನ್ ಅವರನ್ನು ಪರಿಚಯಿಸಿದರು.
ಸೇತುಮಾಧವನ್ ಅವರು ತಮ್ಮ ಚಲನಚಿತ್ರಗಳ ಮೂಲಕ ಬಲವಾದ ಸ್ತ್ರೀ ಪಾತ್ರಗಳನ್ನು ರೂಪಿಸುವಲ್ಲಿ ಹೆಸರುವಾಸಿಯಾಗಿದ್ದರು. ಮೂರು ದಶಕಗಳ ವೃತ್ತಿಜೀವನದಲ್ಲಿ ಸೇತುಮಾಧವನ್ ಅವರು,'ಒಡಯಿಲ್ ನಿನ್ನು', 'ಅನುಭಾವಂಗಲ್ ಪಾಲಿಚಕಲ್', 'ಒಪ್ಪೋಲ್', 'ಅರನಜಿಕನೇರಂ', 'ಅಚಾನಕ್ ಬಪ್ಪಯುಮ್', ಮತ್ತು 'ಪಾಣಿತೀರ್ಥ ವೀಡು' ಮುಂತಾದ ಕೆಲವು ಅಪ್ರತಿಮ ಚಲನಚಿತ್ರಗಳನ್ನು ನೀಡಿದ್ದಾರೆ.
ಸೇತುಮಾಧವನ್ ಅವರಯ ತೆಲುಗು, ಮಲಯಾಳಂ ಮಾತ್ರವಲ್ಲದೇ ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 60ಕ್ಕೂ ಅಧಿಕ ಚಲನಚಿತ್ರಗಳನ್ನು ನೀಡಿದ್ದಾರೆ.
ಇವರು 10 ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಹಲವಾರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2009 ರಲ್ಲಿ ಕೇರಳ ಸರ್ಕಾರ ಸ್ಥಾಪಿಸಿದ ಚಲನಚಿತ್ರ ಕ್ಷೇತ್ರದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ಜೆ.ಸಿ. ಡೇನಿಯಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.