ಶ್ರೀನಗರ, ಡಿ.23 (DaijiworldNews/PY): ಜಮ್ಮು-ಕಾಶ್ಮೀರದ ವಾನ್ಪೋರಾದ ಶ್ರೀನಗರ ರಸ್ತೆಯಲ್ಲಿ ಇರಿಸಿದ್ದ 5 ಕೆ.ಜಿ ತೂಕದ ಐಇಡಿಯನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿ ನಾಶಪಡಿಸಿದ್ದು, ದೊಡ್ಡ ಅನಾಹುತ ತಪ್ಪಿದೆ.
ಭಯೋತ್ಪಾದಕರು ರಸ್ತೆಯಲ್ಲಿ ಐಇಡಿ ಅಳವಡಿಸಿದ್ದಾರೆ ಎನ್ನುವ ಗುಪ್ತಚರ ಮಾಹಿತಿಯ ಮೇರೆಗೆ ಪುಲ್ವಾಮಾ ಪೊಲೀಸರು ಸೇರಿದಂತೆ ಸೇನೆ ಹಾಗೂ ಸಿಆರ್ಪಿಎಫ್ ಜಂಟಿಯಾಗಿ ಶೋಧಾ ಕಾರ್ಯಾಚರಣೆ ನಡೆಸಿತ್ತು. ಬಳಿಕ ಬಾಂಬ್ ಪತ್ತೆ ಹಚ್ಚಿದ ಭದ್ರತಾ ಪಡೆಗಳು ಅದನ್ನು ನಿಯಂತ್ರಿಕ ಸ್ಪೋಟದ ಮೂಲಕ ಸ್ಥಳದಲ್ಲೇ ನಾಶಪಡಿಸಿದ್ದಾರೆ.
ಐಇಡಿ 5 ಕೆ.ಜಿ ತೂಕವಿದ್ದು, ಕಂಟೈನರ್ನಲ್ಲಿ ಜೋಡಿಸಲಾಗಿತ್ತು. ಪೊಲೀಸ್ ಹಾಗೂ ಸೇನೇಯ ಬಾಂಬ್ ನಿಷ್ಕ್ರಿಯ ತಂಡ ಐಇಡಿಯನ್ನು ನಿಯಂತ್ರಿತ ಸ್ಪೋಟದ ಮೂಲಕ ಸ್ಥಳದಲ್ಲೇ ನಾಶಪಡಿಸಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಂತರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ಕೆಲವು ಶಂಕಿತರನ್ನು ಭದ್ರತಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.