ಬೆಂಗಳೂರು, ಡಿ 23 (DaijiworldNews/MS): ಮತಾಂತರ ನಿಷೇಧ ಕಾಯಿದೆ ವಿಚಾರವಾಗಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಆರೋಪ ಪ್ರತ್ಯಾರೋಪ ರಾಜ್ಯದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯಿದೆ ಮತ್ತು ಗೋಹತ್ಯೆ ನಿಷೇಧವನ್ನು ವಾಪಾಸ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಾಯಕರು ಮತಾಂತರ ನಿಷೇಧ ಕಾಯಿದೆ ಕ್ರೈಸ್ತ ಸಮುದಾಯದ ವಿರುದ್ಧವಾಗಿದೆ ಎಂದು ಬಿಂಬಿಸಿ, ಮತಾಂತರ ಮಾಡುತ್ತಿದ್ದದ್ದು ಕ್ರೈಸ್ತರೇ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಕಾಯ್ದೆಯೇ ನಿರ್ದಿಷ್ಟ ಧರ್ಮ, ಮತದವರು ಮತಾಂತರ ಮಾಡುತ್ತಿದ್ದಾರೆ ಎಂದು ಹೇಳದೇ ಇದ್ದರೂ ಮತಾಂತರ ನಿಷೇಧ ಕಾಯಿದೆ ಕ್ರೈಸ್ತರತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಹೇಳಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ" ಸದನದಲ್ಲಿ ಮಂಡಿಸಲಾದ ಮತಾಂತರ ನಿಷೇಧ ಕಾಯಿದೆಯಲ್ಲಿ ಎಲ್ಲಿಯೂ ಕೂಡಾ ನಿರ್ಧಿಷ್ಟವಾಗಿ ಯಾವುದೇ ಧರ್ಮ, ಮತವನ್ನು ಉಲ್ಲೇಖಿಸಿಲ್ಲ.ಆದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕ್ರೈಸ್ತರನ್ನು ಕಾಯ್ದೆಗೆ ಸಮೀಕರಿಸುತ್ತಿದ್ದಾರೆ. ಡಿಕೆಶಿಯವರೇ, ನೀವ್ಯಾಕೆ ಕ್ರೈಸ್ತರತ್ತ ಬೊಟ್ಟು ಮಾಡುತ್ತೀರಿ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯಿದೆ ಮತ್ತು ಗೋಹತ್ಯೆ ನಿಷೇಧವನ್ನು ವಾಪಾಸ್ ಪಡೆದುಕೊಳ್ಳುತ್ತೇವೆ ಎಂದು ಮತಾಂತರ ನಿಷೇಧ ಕಾಯಿದೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಹುಸಂಖ್ಯಾತ ಹಿಂದೂಗಳ ಬಗ್ಗೆ ಇರುವ ಕಾಳಜಿ ಇದರಿಂದಲೇ ಸ್ಪಷ್ಟವಾಗುತ್ತದೆ.ಕಾಂಗ್ರೆಸ್ಸಿಗರೇ ,ನೀವೇಕೆ ಬಹುಸಂಖ್ಯಾತರನ್ನು ಏಕೆ ನಿಕೃಷ್ಟವಾಗಿ ಕಾಣುತ್ತೀರಿ? ಎಂದು ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ, ಹಿಂದೂಗಳ ಬಗ್ಗೆ ನಿಮ್ಮ ನಿಲುವನ್ನು ಮೊದಲು ಮೊದಲು ಸ್ಪಷ್ಟಪಡಿಸಿ.ಮತಾಂತರ ನಿಷೇಧ ಕಾಯಿದೆಯಲ್ಲಿ ಇಲ್ಲದ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಏಕೆ ಜನರನ್ನು ದಾರಿ ತಪ್ಪಿಸುತ್ತೀರಿ? ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಲು ಕಾಂಗ್ರೆಸ್ಅಧಿಕಾರದಲ್ಲಿದ್ದಾಗ ಪ್ರಯತ್ನ ನಡೆಸಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತಾಂತರದ ವಿರುದ್ಧವಾಗಿ ಕರಡು ಸಿದ್ದಪಡಿಸಲು ಸೂಚನೆ ನೀಡಿ, ಕಾನೂನು ಇಲಾಖೆ ಸಿದ್ಧಪಡಿಸಿದ್ದ ಮಸೂದೆಗೆ ಸಹಿ ಕೂಡಾ ಮಾಡಿದ್ದರು. ಈಗ ಯಾವ ಕಾರಣಕ್ಕಾಗಿ ವಿರೋಧಿಸುತ್ತಿದ್ದೀರಿ? ಎಂದು ಹೇಳಿದೆ.