ಬರೇಲಿ, ಡಿ.23 (DaijiworldNews/PY): ಮಗನ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಸಿಡಿದ ಗುಂಡಿಗೆ ತಾಯಿ ಬಲಿಯಾದ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ.
ಮೃತರನ್ನು ಅನಿತಾ ವರ್ಮಾ (28) ಎಂದು ಗುರುತಿಸಲಾಗಿದೆ.
ಪ್ರದೀಪ್ ವರ್ಮಾ ಎನ್ನುವ ರೈತರೋರ್ವರ ಪತ್ನಿ ಅನಿತಾ ವರ್ಮಾ ಅವರು ತಮ್ಮ ಮಗನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದರು. ಈ ಸಂದರ್ಭ 100ಕ್ಕೂ ಅಧಿಕ ಸ್ನೇಹಿತರು ಹಾಗೂ ಸಂಬಂಧಿಕರು ಪಾಲ್ಗೊಂಡಿದ್ದರು.
ಈ ವೇಳೆ ಅನಿತಾ ವರ್ಮಾ ಅವರ ಸಂಬಂಧಿಗಳು ಸಂಭ್ರಮಾಚರಣೆ ಮಾಡುವ ಭರದಲ್ಲಿ ಪಿಸ್ತೂಲ್ನಿಂದ ಸಿಡಿಸಿದ ಗುಂಡಿಗೆ ಅನಿತಾ ಅವರು ಸಾವನ್ನಪ್ಪಿದ್ದಾರೆ.
ಘಟನೆಯ ಸಂಬಂಧ ಜೈರಾಮ್ ವರ್ಮಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಜೈರಾಮ್ ವರ್ಮಾ ಕುಟುಂಬಕ್ಕೆ ಆತ್ಮೀಯರಾಗಿದ್ದು, ಅವರನ್ನೂ ಆಹ್ವಾನಿಸಲಾಗಿತ್ತು. ಜೈರಾಮ್ ಅವರು ಮದ್ಯದ ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.