ಬೆಳಗಾವಿ, ಡಿ.23 (DaijiworldNews/PY): "ಮತಾಂತರ ನಿಷೇಧ ಕಾಯ್ದೆಯ ಪ್ರತಿ ಹರಿದು ಹಾಕಿ ಅಪಮಾನ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಮುಮಾರ್ ಅವರು ಕ್ಷಮೆ ಯಾಚಿಸಬೇಕು" ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಹೋಗಬೇಡಿ. ಮತಾಂತರ ನಿಷೇಧ ಕಾಯ್ದೆ ಅಂಗೀಕಾರಕ್ಕೆ ಸಹಕರಿಸಿ" ಎಂದು ಮನವಿ ಮಾಡಿದ್ಧಾರೆ.
"ಎಲ್ಲಾ ಕಡೆ ಕಾಂಗ್ರೆಸ್ ಸೋತಿದೆ. ಆದರೆ, ಇನ್ನೂ ಸಹ ಅವರಿಗೆ ಬುದ್ದಿ ಬಂದಿಲ್ಲ. ದೇಶದಲ್ಲಿ 400 ಇದ್ದ ಕಾಂಗ್ರೆಸ್ನವರು ಈಗ 46ಕ್ಕೆ ಬಂದಿದೆ. ಕರ್ನಾಟದಲ್ಲಿ ಕಾಂಗ್ರೆಸ್ಸಿಗರು ಅಲ್ಪ-ಸ್ವಲ್ಪ ಉಸಿರಾಡುತ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿ ಅದನ್ನೂ ಕಳೆದುಕೊಳ್ಳುತ್ತಾರೆ" ಎಂದಿದ್ದಾರೆ.
"ಎಂಇಎಸ್ನವರು ತಮ್ಮ ಪುಂಡಾಟವನ್ನು ಮತ್ತೆ ಪ್ರದರ್ಶಿಸಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದಾರೆ. ಮಾತ್ರವಲ್ಲದೇ ಮುಖ್ಯಮಂತ್ರಿಯ ಪ್ರತಿಕೃತಿ ದಹನ ಮಾಡಿದ್ದಾರೆ. ಎಂಇಎಸ್ ನಿಷೇಧಕ್ಕೆ ನಾವು ಈಗಲೇ ಒತ್ತಾಯ ಮಾಡಿದ್ದೇವೆ" ಎಂದು ಹೇಳಿದ್ಧಾರೆ.