ಮೈಸೂರು, ಡಿ 23 (DaijiworldNews/MS): ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಾಣಿಸಿಕೊಂಡಿದೆ. ವಿದೇಶದಿಂದ ಬಂದಿದ್ದ9 ವರ್ಷದ ಬಾಲಕಿಯಲ್ಲಿ ಸೋಂಕು ತಗುಲಿದ್ದು ಸದ್ಯ ಬಾಲಕಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಮೈಸೂರು ಮೂಲದ ಕುಟುಂಬದವರು ಸ್ವಿಡ್ಜರ್ಲ್ಯಾಂಡ್ನಲ್ಲಿ ನೆಲೆಸಿದ್ದರು. ಕ್ರಿಸ್ಮಸ್ ಸಲುವಾಗಿ ಭಾರತಕ್ಕೆ ಬಂದಿದ್ದರು. ಬಾಲಕಿ ಹಾಗೂ ಆಕೆಯ ಪೋಷಕರು ಸ್ವಿಝರ್ ಲ್ಯಾಂಡ್ ನಿಂದ ಅಬುಧಾಬಿಗೆ ಬಂದು ಎರಡು ದಿನ ತಂಗಿದ್ದರು. ನಂತರ, ಅವರು ಡಿ.19ರಂದು ಮೈಸೂರಿಗೆ ಬಂದಿದ್ದರು.
ಈ ವೇಳೆ ಅವರ ಗಂಟಲುದ್ರವದ ಮಾದರಿಯನ್ನು ಪರೀಕ್ಷೆಗೆ ತೆಗೆದು ಕೊಳ್ಳಲಾಗಿತ್ತು. ಬುಧವಾರ ವರದಿ ಬಂದಿದೆ. ಸದ್ಯ ಇವರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.