ಬೆಳಗಾವಿ, ಡಿ.22 (DaijiworldNews/HR): ಕಾಂಗ್ರೆಸ್, ಜೆಡಿಎಸ್ ಮತಾಂತರ ಕಾಯ್ದೆಯನ್ನು ಯಾಕೆ ವಿರೋಧಿಸುತ್ತಿದೆ ಗೊತ್ತಿಲ್ಲ, ಡಿಕೆಶಿ ಅವರಿಗೆ ಮತಾಂತರವಾದ ಹೆಣ್ಣು ಮಕ್ಕಳ ಕಷ್ಟ ಗೊತ್ತಿಲ್ಲ ಎಂದು ಸಚಿವ ಕೆ. ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ಈ ಕುರಿರು ಸುದ್ದಿಗಾರರೊಂದಿಗೆ ಮಾತನಾಡಿ, "ಡಿಕೆಶಿ ಅವರು ಬಂದರೆ ಅವರನ್ನು ವಯುಕ್ತಿಕವಾಗಿ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಅವರಿಗೆ ಮತಾಂತರ ಆದ ಹೆಣ್ಣು ಮಕ್ಕಳ ಕಷ್ಟ ಗೊತ್ತಾಗಲಿ. ಮತಾಂತರ ಕಾಯ್ದೆ ಬಗ್ಗೆ ಬಂದಾಗ ಡಿಕೆಶಿ, ಸಿದ್ದರಾಮಯ್ಯ, ಜಾರ್ಜ್ ಸದನದಲ್ಲೇ ಚರ್ಚೆ ಮಾಡಿ ಹೊರ ಹೋಗಿದ್ದಾರೆ ಆದರೆ ನಾವು ಕಾನೂನು ಬದ್ದವಾಗಿ ಮತಾಂತರ ಕಾಯ್ದೆ ಜಾರಿಗೆ ತರುತ್ತೇವೆ" ಎಂದರು.
ಇನ್ನು ಮತಾಂತರ ಕಾಯ್ದೆ ತರುತ್ತಿರುವ ಉದ್ದೇಶ, ಯಾರನ್ನೂ ಬಲವಂತವಾಗಿ ಮತಾಂತರ ಮಾಡಬಾರದು. ಆಸೆ, ಆಮಿಷ ತೋರಿಸಿ ಮತಾಂತರ ಮಾಡಲಾಗುತ್ತದೆ. ವಿಕಲಾಂಗರಿಗೆ ಆಮಿಷ ತೋರಿಸಿ ಮತಾಂತರ ಮಾಡುತ್ತಿದ್ದಾರೆ. ಹಾಗಾಗಿ ಇದನ್ನು ತಡೆಯಲು ಮತಾಂತರ ಕಾಯ್ದೆಯನ್ನು ಜಾರಿಗೊಳಿಸಲಾಗುವುದು" ಎಂದು ಹೇಳಿದ್ದಾರೆ.