ಬೆಳಗಾವಿ, ಡಿ.22 (DaijiworldNews/HR): ಮತಾಂತರ ನಿಷೇಧ ವಿಧೇಯಕದ ಮೇಲೆ ಚರ್ಚೆಗೆ ಸ್ಪೀಕರ್ ಇಂದು ಅವಕಾಶ ನೀಡಿದ್ದು, ಬೆಳಗಾವಿಯ ಸುವರ್ಣ ಸೌಧದ ಒಳಗೆ ಮಾಧ್ಯಮಗಳ ಪ್ರತಿನಿಧಿಗಳಿಗೆ ಅವಕಾಶ ನೀಡದಂತೆ ಸ್ಪೀಕರ್ ಸೂಚಿಸಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಿನ್ನೆ ಮತಾಂತರ ನಿಷೇಧ ವಿಧೇಯಕವನ್ನು ಸರ್ಕಾರ ಮಂಡಿಸಲಾಗಿದ್ದು, ಇಂದು ವಿಧೇಯಕದ ಮೇಲಿನ ಚರ್ಚೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅವಕಾಶ ಮಾಡಿಕೊಟ್ಟಿದ್ದಾರೆ.
ಇನ್ನು ಇಂದು ಮತಾಂತರ ನಿಷೇಧ ವಿಧೇಯಕದ ಮೇಲೆ ಚರ್ಚೆಯ ಹಿನ್ನಲೆಯಲ್ಲಿ, ಸುವರ್ಣ ಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಸ್ಪೀಕರ್ ಅವರು ಮಾರ್ಷಲ್ಗಳಿಗೆ ಸುವರ್ಣ ಸೌಧ ಪ್ರವೇಶಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲು ಸೂಚಿಸಿರುವ ಕಾರಣ, ಸುವರ್ಣಸೌಧದ ಗೇಟ್ ಬಳಿಯಲ್ಲಿಯೇ ಮಾಧ್ಯಮಗಳನ್ನು ತಡೆದು ನಿಲ್ಲಿಸಲಾಗಿದೆ.