ಚಿಕ್ಕಮಗಳೂರು, ಡಿ.21 (DaijiworldNews/SM): ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ. ಪುಂಡಾಟಿಕೆ ಮೆರೆದಿರುವ ಹಿನ್ನೆಲೆಯಲ್ಲಿ ಆ ಸಂಘಟನೆ ಇರಬೇಕಾಗಿದ್ದುದು, ಮಹಾರಾಷ್ಟ್ರದಲ್ಲಿ ಹೊರತಾಗಿ ಕರ್ನಾಟಕದಲ್ಲಿ ಅಲ್ಲ ಎಂದಿದ್ದಾರೆ.
ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, ಬೆಳಗಾವಿ ನಮ್ಮ ಹಕ್ಕು ಎಂದಿದ್ದಾರೆ. ಮಹಾರಾಷ್ಟ್ರದವರು ಹೇಗೆ ಸೊಲ್ಲಾಪುರ, ನಾಂದೆಡನ್ನು ಮಹಾರಾಷ್ಟ್ರ ಬಿಟ್ಟುಕೊಡುವುದಿಲ್ಲವೋ ಅದೇ ರೀತಿಯಲ್ಲಿ ನಾವು ಕೂಡ ಬೆಳಗಾವಿ ಬಗ್ಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ನಾವು ಮರಾಠಿಗರನ್ನು ಹಾಗೂ ಕನ್ನಇಗರನ್ನು ಒಂದೇ ತಾಯಿಯ ಮಕ್ಕಳಂತೆ ನೋಡಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಪ್ರತ್ಯೇಕತನ ತೋರಿಲ್ಲ. ಆದರೆ, ಮಹಾರಾಷ್ಟ್ರ ಸರಕಾರ ಮಾತ್ರ ಭೇದ ಭಾವ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರುನಾಡಿನಲ್ಲಿದ್ದು, ಇಲ್ಲಿನ ನೆಲದ ಜಲ ಸೇವಿಸಿ ಕನ್ನಡಾಂಬೆಗೆ ಅವಮಾನ ಮಾಡಿದವರನ್ನು ಸಹಿಸಲು ಸಾಧ್ಯವಿಲ್ಲ. ಅವರಿಗೆ ತಕ್ಕ ಶಿಕ್ಷೆಯಾಗಲೇಬೆಂಕೆಂದು ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.