ಬೆಂಗಳೂರು, ಡಿ.21 (DaijiworldNews/SM): ‘ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣೆ ವಿಧೇಯಕ 2021’ ವಿಧಾನಸಭೆಯಲ್ಲಿ ಮಂಗಳವಾರದಂದು ಮಂಡಿಸಲಾಗಿದೆ. ಪ್ರತಿ ಪಕ್ಷಗಳು ವಿಧೇಯಕವನ್ನು ವಿರೋಧಿಸಿವೆ.
ಮತಾಂತರ ನಿಷೇಧ ವಿಧೇಯಕದಲ್ಲಿರುವ ಪ್ರಮುಖಾಂಶಗಳು:
ಒತ್ತಾಯ, ಆಮಿಷ ಒಡ್ಡಿ ಮತಾಂತರ ಮಾಡುವುದಕ್ಕೆ ನಿಷಿದ್ಧ
ಯಾವುದೇ ರೀತಿಯ ಉಡುಗೊರೆ, ಹಣ ನೀಡಿ ಮತಾಂತರಗೊಳಿಸುವಂತಿಲ್ಲ
ಪ್ರತಿಷ್ಠಿತ ಶಾಲೆಯಲ್ಲಿ ಉಚಿತ ಶಿಕ್ಷಣದ ಭರವಸೆ
ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗದ ಆಮಿಷ ಒಡ್ಡುವಂತಿಲ್ಲ
ಶಿಕ್ಷಣ ಸಂಸ್ಥೆ, ಅನಾಥಾಶ್ರಮ, ವೃದ್ಧಾಶ್ರಮ, ಆಸ್ಪತ್ರೆ
ಧಾರ್ಮಿಕ ಮಿಷನರಿ, ಎನ್ಜಿಒಗಳು
ಒಂದು ಅಥವಾ ಹೆಚ್ಚು ಮಂದಿಯ ಸಾಮೂಹಿಕ ಮತಾಂತರದಲ್ಲಿ ತೊಡಗಿದರೆ
ಅಂತಹ ಸಂಸ್ಥೆಗಳಿಗೆ ಸರ್ಕಾರದ ಅನುದಾನ ಕಡಿತವಾಗಲಿದೆ
ಅಪ್ರಾಪ್ತ ವಯಸ್ಕರು, ಪರಿಶಿಷ್ಟ ಜಾತಿ, ಪಂಗಡದವರನ್ನು ಮತಾಂತರ ಮಾಡಿದ್ರೆ
ಕನಿಷ್ಠ 3ರಿಂದ 10 ವರ್ಷ ಜೈಲು ಶಿಕ್ಷೆ, 50,000 ರೂ. ದಂಡ
ಸಾಮೂಹಿಕ ಮತಾಂತರ ಮಾಡಿದ್ರೆ 3ರಿಂದ 10 ವರ್ಷ ಜೈಲು 1 ಲಕ್ಷ ರೂ ದಂಡ
ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧ
ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ ದೂರನ್ನು ನೀಡಿದರೆ ಎಫ್ ಐಆರ್ ದಾಖಲಿಸುವ ಅವಕಾಶವಿದೆ
ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ
ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ ವಸೂಲಾತಿಗೆ ಅವಕಾಶವಿದೆ
ಅಪ್ರಾಪ್ತರು, ಬುದ್ದಿಮಾಂದ್ಯ ವ್ಯಕ್ತಿಗಳು, ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ
ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ