ಚಿಕ್ಕಮಗಳೂರು, ಡಿ.21 (DaijiworldNews/HR): ತುಕ್ಡೆ ಗ್ಯಾಂಗ್ನ ಪ್ರಚೋದನೆಯಿಂದ ಕರ್ನಾಟಕದಲ್ಲಿ ಬೆಂಕಿ ಹತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬೆಳಗಾವಿಯಲ್ಲಿ ಕನ್ನಡ ಭಾವುಟ ಸುಟ್ಟು ಗಲಭೆ ಎಬ್ಬಿಸುವಂತಹ ಕೆಲಸ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಮಾಡಿದ್ದು, ಶಿವಾಜಿ ಪ್ರತಿಮೆಗೆ ಮಸಿ ಬಳಿದು ಮರಾಠಿಗರನ್ನು ಎತ್ತು ಕಟ್ಟುವ ಷಡ್ಯಂತ್ರ ನಡೆಸಿದ್ದಾರೆ" ಎಮ್ದು ಆರೋಪಿದ್ದಾರೆ.
ಇನ್ನು "ಈ ಎಲ್ಲಾ ಘಟನೆಯ ಹಿಂದೆ ಕಾಂಗ್ರೆಸ್ ಇದೆ. ಈಗ ಬಂಧನವಾಗಿರುವುದು ಕಾಂಗ್ರೆಸ್ ಬೆಂಬಲಿಗರು. ಬಂಧಿತರು ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಖಾನ್ ಬೆಂಬಲಿಗರು. ತುಕ್ಡೆ ಗ್ಯಾಂಗ್ ನಲ್ಲಿದ್ದವರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ತುಕ್ಡೆ ಗ್ಯಾಂಗ್ ನ ಪ್ರಚೋದನೆಯಿಂದ ಕರ್ನಾಟಕದಲ್ಲಿ ಬೆಂಕಿ ಹತ್ತಿದೆ" ಎಂದಿದ್ದಾರೆ.
ಪಟಾಕಿ ರವಿ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ರವಿ, "ಪಟಾಕಿ ಶುಭ ಕಾರ್ಯದಲ್ಲಿ ಸ್ವಾಗತ ಮಾಡಲು ಹಚ್ಚುತ್ತಾರೆ. ಆದರೆ ಬೆಂಕಿ ಹಚ್ಚುವ ಜಾಯಾಮಾನಕ್ಕೆ ನಾನು ಸೇರಿದವನಲ್ಲ.ಇವರ ಉದ್ದೇಶ ಅರಾಜಕತೆ ಸೃಷ್ಟಿ ಮಾಡುವುದು, ಬೆಂಕಿ ಹಾಕುವುದು. ಆ ಬೆಂಕಿ ಹಾಕುವ ಜಾಯಮಾನಕ್ಕೆ ನಾನು ಸೇರಿದವನಲಲ್ಲ" ಎಂದು ಹೇಳಿದ್ದಾರೆ.