ಗದಗ, ಡಿ.21 (DaijiworldNews/HR): ವಜಾಗೊಂಡಿದ್ದ ಕೆಎಸ್ಆರ್ಟಿಸಿ ಸಿಬ್ಬಂದಿಯನ್ನು 4 ವಾರದೊಳಗೆ ಮರುನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಾಲ್ಕು ವಾರದೊಳಗೆ ಕೆಎಸ್ಆರ್ಟಿಸಿ ಸಿಬ್ಬಂದಿ ಮರುನೇಮಕ ಮಾಡಿಕೊಳ್ಳಬೇಕು ಎಂದು 4 ವಿಭಾಗಗಳ ಎಂಡಿಗಳಿಗೂ ಸೂಚಿಸಲಾಗಿದ್ದು, ಸಾರಿಗೆ ಸಿಬ್ಬಂದಿಗಳ ಸಮಸ್ಯೆ ನಿವಾರಣೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದರು.
ಇನ್ನು ಎಂಇಎಸ್ ಪುಂಡಾಟ ಪ್ರಕರಣದ ವಿರುದ್ಧ ಕಿಡಿಕಾರಿದ ಅವರು, ಎಂಇಎಸ್ ಎಂದ್ರೆ ಮಹಾ ಎಡವಟ್ಟು ಸಂಘ. ಅವರ ಪುಂಡಾಟಿಕೆ, ಹೇಡಿ ಕೃತ್ಯಕ್ಕೆ ಗೂಂಡಾ ಕಾಯ್ದೆ ದಾಖಲಿಸುವ ಮೂಲಕ ರಾಜ್ಯ ಸರ್ಕಾರ ಪ್ರತ್ಯುತ್ತರ ನೀಡಿದ್ದು, ಇಂತಹ ಪುಂಡಾಟ ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ"ಎಂದು ಹೇಳಿದ್ದಾರೆ.