ನವದೆಹಲಿ, ಡಿ.21 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರು ಚೀನೀಯರ ಕುರಿತಾಗಿರುವ ಮೌನವು ಸತ್ಯವಂತನೆಂಬ ಅವರ ಖ್ಯಾತಿಗೆ ಧಕ್ಕೆ ತರುತ್ತದೆ ಎಂದು ರಾಜ್ಯಸಭೆಯ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ 'ಕೂ'ನಲ್ಲಿ ಪೋಸ್ಟ್ ಪ್ರಕಟಿಸಿರುವ ಅವರು, "ಯಾರೂ ಬಂದಿಲ್ಲ ಎಂದ ನಂತರವೂ, ಗಡಿ ನಿಯಂತ್ರಣಾ ರೇಖೆಯ ಬಳಿ ಹಲವು ಪ್ರದೇಶಗಳನ್ನು ಚೀನಾ ವಶಕ್ಕೆ ಪಡೆದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್ ಮತ್ತು ಅರುಣಾಚಲದಲ್ಲಿನ ಆತಿಕ್ರಮಣದ ಬಗ್ಗೆ ಮೌನವಾಗಿದ್ದರೆ, ಅದು ಅವರ ಸತ್ಯವಂತನೆಂಬ ಖ್ಯಾತಿಗೆ ಧಕ್ಕೆ ತರುತ್ತದೆ"ಎಂದಿದದಾರೆ.
ಇನ್ನು ಈ ವಿಚಾರದಲ್ಲಿನ ಮೋದಿ ಮೌನ ಬಿಜೆಪಿಯನ್ನು ಅಂಧಕಾರಕ್ಕೆ ತಳ್ಳುತ್ತದೆ. ವಾಸ್ತವ ಪರೀಕ್ಷಿಸಲು ಇದು ಸರಿಯಾದ ಎಂದು ಹೇಳಿದ್ದಾರೆ.