ಬೆಳಗಾವಿ,ಡಿ 21 (DaijiworldNews/MS) : ಎಂಇಎಸ್ ಪುಂಡಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ, ಡಿಕೆಶಿ ಇದರ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಎಂದು ಆರೋಪ ಮಾಡಿದ್ದ ಸಿ.ಟಿ.ರವಿ ಹೇಳಿಕೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿ.ಟಿ.ರವಿ ಅಲ್ಲ ಆತ ಪಟಾಕಿ ರವಿ, ಏನೋ ಒಂದ್ ಹಚ್ಚಿ ಬಿಡ್ತಾನೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಸಂಘರ್ಷ ಉಂಟು ಮಾಡಿ ರಾಜಕೀಯ ದುರ್ಲಾಭ ಪಡೆಯುವ ಷಡ್ಯಂತ್ರ ವನ್ನು ನಡೆಸಲಾಗಿದ್ದು ಈ ಪ್ರಕರಣದ ನಿರ್ಮಾಪಕರು, ಡೈರೆಕ್ಟರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನ್ನೋದು ಬಹಳ ಸ್ಪಷ್ಟವಾಗಿದೆ ಎಂದು ಸಿ.ಟಿ ರವಿ ಟೀಕಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆಶಿ , ಸಿ.ಟಿ.ರವಿಯಲ್ಲ ಪಟಾಕಿ ರವಿ. ಆ ಪಟಾಕಿ ರವಿಗೂ ನನಗೂ ಸಂಬಂಧವಿಲ್ಲ ಏನೋ ಒಂದ್ ಪಟಾಕಿ ಹಚ್ಚಿ ಬಿಡ್ತಾನೆ ಎಂದು ಲೇವಡಿ ಮಾಡಿದ್ದಾರೆ.
ಎಂಇಎಸ್ ಬಗ್ಗೆ ಕಾಂಗ್ರೆಸ್ ಡಬಲ್ ಸ್ಟ್ಯಾಂಡ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರ್ಯಾರೋ ತಲೆ ಕೆಟ್ಟೋರು ಮಾಡ್ತಾರೆ. 4-5 ಜನ ಕಿಡಿಗೇಡಿ ಕೃತ್ಯ ಮಾಡಿದ ತಕ್ಷಣ ನಾವು ಬಿಜೆಪಿಗರು ಮಾಡಿದ್ದು ಎನ್ನಲಾಗುತ್ತಾ ಎಂದು ತಿರುಗೇಟು ನೀಡಿದರು.