ಮುಂಬೈ, ಡಿ.21 (DaijiworldNews/HR): ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಪುಂಡಾಟ ಮುಂದುವರೆದಿದ್ದು, ಸಾರಿಗೆ ಬಸ್ ಗಳನ್ನು ತಡೆದು ಕಪ್ಪು ಮಸಿ ಬಳಿದು, ಚಾಲಕನಿಗೂ ಹಿಂಸೆ ನೀಡಿರುವ ಘಟನೆ ನಡೆದಿದೆ.
ಮುಂಬೈನಿಂದ ಕಲಬುರ್ಗಿಗೆ ಆಗಮಿಸುತ್ತಿದ್ದ ಸಾರಿಗೆ ಬಸ್ ನ್ನು ತಡೆದ ಎಂಇಎಸ್ ಕಾರ್ಯಕರ್ತರು, ಬಸ್ ಮೇಲೆ ಕಪ್ಪು ಮಸಿ ಬಳಿದು ಜೈ ಶಿವಾಜಿ ಎಂದು ಬರೆದಿದ್ದು, ಬಸ್ ಚಾಲಕನ ಕೈಯಲ್ಲಿ ಬಲವಂತವಾಗಿ ಎಂಇಎಸ್ ಬಾವುಟ ಕೊಟ್ಟು, ಜೈ ಶಿವಾಜಿ ಎಂದು ಘೋಷಣೆ ಕೂಗಿಸಿದ್ದಾರೆ ಎನ್ನಲಾಗಿದೆ.
ಇನ್ನು ಶಿವಸೇನೆಯ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಕನ್ನಡಿಗರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಸರ್ವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಕ್ ಮನೆಗೆ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ತೆರಳಿದ ಶಿವಸೇನೆ ಪುಂಡರು, ಶಿವಕುಮಾರ್ ಅವರ ಕೊರಳುಪಟ್ಟಿ ಹಿಡಿದು ಥಳಿಸಿದ್ದಾರೆ.
ಕನ್ನಡಿಗರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ದೃಶ್ಯವನ್ನು ಶಿವಸೇನೆ ಕಾರ್ಯಕರ್ತರೇ ವಿಡಿಯೋ ಮಾಡಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.