ಲಖನೌ, ಡಿ.21 (DaijiworldNews/HR): ಉತ್ತರ ಪ್ರದೇಶದ ಸರ್ಕಾರವು ಒಂದು ಕೋಟಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, "ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ರಂದು ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಲಾಗುವುದು. ಅಂದು ಒಂದು ಲಕ್ಷ ಸ್ಮಾರ್ಟ್ ಫೋನ್ಗಳನ್ನು ವಿತರಿಸಲಾಗುತ್ತದೆ. ಈ ಯೋಜನೆಯು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಎಂ.ಎ., ಬಿ.ಎ., ಬಿಎಸ್ಸಿ, ಐಟಿಐ, ಎಂಬಿಬಿಎಸ್, ಎಂ.ಡಿ., ಬಿ.ಟೆಕ್, ಎಂ.ಟೆಕ್ ಸೇರಿದಂತೆ ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ ಪಡೆಯಲು ಅರ್ಹರಾಗಿದ್ದಾರೆ" ಎಂದರು.
ಇನ್ನು ಈ ಸೌಲಭ್ಯ ಪಡೆಯುವುದಕ್ಕಾಗಿ 'ಡಿಜಿ ಶಕ್ತಿ ಪೋರ್ಟಲ್'ನಲ್ಲಿ 38 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ನೋಂದಣಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.