ಅಹಮದಾಬಾದ್, ಡಿ.20 (DaijiworldNews/PY): "ಗುಜರಾತ್ ಕರಾವಳಿಯಲ್ಲಿ ಪಾಕಿಸ್ತಾನದ ಮೀನುಗಾರಿಕೆ ದೋಣಿಯೊಂದರಲ್ಲಿ ಸಾಗಿಸುತ್ತಿದ್ದ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ" ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 400 ಕೋಟಿ ರೂ. ಮೌಲ್ಯದ 77 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಭಾನುವಾರ ರಾತ್ರಿ, ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದಕ ನಿಗ್ರಹ ದಳ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ಧಾರೆ.
"ಹೆಚ್ಚಿನ ತನಿಖೆಗಾಗಿ ದೋಣಿಯನ್ನು ಕಚ್ ಜಿಲ್ಲೆಯ ಜಖೌ ತೀರಕ್ಕೆ ತರಲಾಗಿದೆ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಚ್ ಮುಂದ್ರಾ ಬಂದರಿನಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ 21 ಸಾವಿರ ಕೋಟಿ ರೂ. ಮೌಲ್ಯದ 3 ಸಾವಿರ ಕೆ.ಜಿ ಡ್ರಗ್ಸ್ ಪತ್ತೆಯಾಗಿತ್ತು.