ಗಾಂಧಿನಗರ, ಡಿ.20 (DaijiworldNews/HR): ಅಹಮದಬಾದ್ನಲ್ಲಿ 25 ವರ್ಷದ ಯುವತಿಯೊಬ್ಬಳು ಮಾತನಾಡಲು ನಿರಾಕರಿಸಿಕ್ಕೆ ಆಕೆಯ ಮೇಲೆ ವ್ಯಕ್ತಿಯೋರ್ವ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ್ದ ಆರೋಪಿ ವಿರುದ್ಧ ವೆಜಾಲ್ಪುರ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.
ಸಾಂದರ್ಭಿಕ ಚಿತ್ರ
ಸಂತ್ರಸ್ತೆ ಹಾಗೂ ವೆಜಲ್ಪುರದಲ್ಲಿ ವಾಸಿಸುವ ಮನ್ಸೂರಿ ಇಬ್ಬರೂ ಸುಮಾರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ ಇದೀಗ ಯುವತಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನು ಮನ್ಸೂರಿ ಎಂಬಾತ ಸಂತ್ರಸ್ತೆ ಮನೆಗೆ ಆಗಮಿಸಿ ಮತನಾಡುವುದನ್ನು ನಿಲ್ಲಿಸಿರುವ ಕುರಿತಂತೆ ಪ್ರಶ್ನಿಸಿದ್ದಾಗ, ಯುವತಿ ನಿನ್ನೊಂದಿಗೆ ಸ್ನೇಹ ಬೆಳೆಸಲು ಇಷ್ಟವಿಲ್ಲ ಎಂದು ಹೇಳಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಮನ್ಸೂರಿ ಆಕೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ವೇಳೆ ಯುವತಿ ಕಿರುಚಾಡಿದ್ದರಿಂದ ಅವರ ನೆರೆಹೊರೆಯವರು ಧಾವಿಸಿದಾರೆ. ಆಗ ವ್ಯಕ್ತಿ ಸಂತ್ರಸ್ತೆಗೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ವಿರುದ್ಧ ಕ್ರಮಿನಲ್ ಬೆದರಿಕೆ ಮತ್ತು ಇತರ ದೂರುಗಳನ್ನು ದಾಖಲಿಸಿದ್ದಾರೆ.