ನವದೆಹಲಿ, ಡಿ 20 (DaijiworldNews/MS): 200 ಕೋಟಿ ವಂಚನೆ ಪ್ರಕರಣದಲ್ಲಿ ನವದೆಹಲಿಯ ತಿಹಾರ್ ಜೈಲಿನಲ್ಲಿರುವ ಸುಖೇಶ್ ಚಂದ್ರಶೇಖರ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ಪ್ರಕರಣದಲ್ಲಿ ಜಾಕ್ವಲಿನ್ , ನೋರಾ ಹೊರತುಪಡಿಸಿ ನಟಿಯರಾದ ಶಿಲ್ಪಾ ಶೆಟ್ಟಿ, ಶೃದ್ದಾ ಕಪೂರ್ ಹಾಗೂ ನಟ ಕಾರ್ತಿಕ್ ಆರ್ಯನ್ ಹೆಸರು ಕೇಳಿಬಂದಿದೆ.
2015 ರಿಂದ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಜೊತೆ ಸ್ನೇಹವಿರುವುದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಂಚಕ ಸುಕೇಶ್ ಹೇಳಿಕೆ ನೀಡಿದ್ದಾನೆ. ಜೊತೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕೇಸ್ನಲ್ಲಿ ಶ್ರದ್ಧಾಗೆ ಸಹಾಯ ಮಾಡಿರುವ ವಿಚಾರವನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾನೆ.
ನಟ ಕಾರ್ತಿಕ್ ಆರ್ಯನ್ ನಟನೆಯ ‘ಕ್ಯಾಪ್ಟನ್’ ಸಿನಿಮಾಕ್ಕೆ ತಾನು ಸಹ ನಿರ್ಮಾಪಕನಾಗುವ ಯೋಜನೆ ಹಾಕಿಕೊಂಡಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಇದಲ್ಲದೆ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ, ಬಿಡುಗಡೆ ಮಾಡಲು ನಟಿ ಶಿಲ್ಪಾ ಶೆಟ್ಟಿ ತನ್ನನ್ನು ಸಂಪರ್ಕಸಿದ್ದರು ಎಂದು ಇ.ಡಿ ಅಧಿಕಾರಿಗಳ ಮುಂದೆ ಸುಕೇಶ್ ಚಂದ್ರಶೇಖರ್ ಮಾಹಿತಿ ನೀಡಿದ್ದಾನೆ.
ಹೀಗೆ ಇ.ಡಿ ಅಧಿಕಾರಿಗಳ ಮುಂದೆ ಸುಕೇಶ್ ದಿನಕ್ಕೊಬ್ಬರ ಹೆಸರುಗಳನ್ನು ಬಹಿರಂಗಪಡಿಸುತ್ತಿದ್ದಾನೆ.