ಬೆಳಗಾವಿ, ಡಿ.20 (DaijiworldNews/HR): ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳುವ ಬದಲಾಗಿ, ಎಂಇಎಸ್ ವಿಚಾರದಲ್ಲಿ ಹೊಂದಾಣಿಕ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದು, ಬಿಜೆಪಿಗೆ ಎಂಇಎಸ್ ಅವರ ತಂತ್ರಗಾರಿಕೆ ಗೊತ್ತಿದೆ. ಅದರಿಂದಲೇ ಆ ಬಗ್ಗೆ ಬಿಜೆಪಿಗೆ ಈ ನಿಲುವು" ಎಂದರು.
ಇನ್ನು ಬಿಜೆಪಿ ಎಂಇಎಸ್ ಬಗ್ಗೆ ಯಾವುದೇ ನಿಲುವು ಹೊಂದಿರಲಿ. ಆದರೆ ಜ್ಯದಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿ ವಿರೂಪಗೊಳಿಸಿ, ಪುಂಡಾಟಿಕೆ ಮೆರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.