ಬೆಳಗಾವಿ, ಡಿ.20 (DaijiworldNews/HR): "ನಾನು ಜೀವಂತ ಇಲ್ಲ, ನಾಲ್ಕು ದಿನಗಳ ಹಿಂದೆಯೇ ನಾನು ಸತ್ತು ಹೋಗಿದ್ದೇನೆ. ನೀವು ಜೀವಂತ ಇರುವವರನ್ನು ಮಾತನಾಡಿಸಿ" ಎಂದು ಎಂಇಎಸ್ ಪುಂಡಾಟಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸದೆ ಕೈ ಮುಗಿದು ಹೋದ ರಮೇಶ್ ಕುಮಾರ್ ಅವರು, "ಜೀವಂತ ಇರುವವರನ್ನು ಮಾತನಾಡಿಸಿ, ನಾನು ಜೀವಂತ ಇಲ್ಲ, ನಾಲ್ಕು ದಿನಗಳ ಹಿಂದೆಯೇ ನಾನು ಸತ್ತು ಹೋಗಿದ್ದೇನೆ" ಎಂದಿದ್ದಾರೆ.
ಇನ್ನು ಕಳೆದ ವಾರ ಸದನದಲ್ಲಿ ಎಲ್ಲರೂ ಮಾತನಾಡಲು ಆರಂಭಿಸಿದರೆ ಏನು ಮಾಡುವುದು, ಲೆಟ್ ಅಸ್ ಎಂಜಾಯ್ ದ ಸಿಚುವೇಷನ್ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಳಿದಾಗ ಎದ್ದು ನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರ ತಡೆಯಲು ಸಾಧ್ಯವಿಲ್ಲವೆಂದರೆ ಮಲಗಿ ಆನಂದಿಸಿ ಎಂದಿದ್ದರು. ಅವರ ಈ ಹೇಳಿಕೆಗೆ ದೇಶದಾದ್ಯಂತ ತೀವ್ರ ಖಂಡತೆ ವ್ಯಕ್ತವಾಗಿದೆ.