ಇಂದೋರ್, ಡಿ.20 (DaijiworldNews/PY): "ಕೃಷ್ಣನ ಜನ್ಮಸ್ಥಳವಾದ ಮಥುರಾ ಕ್ಷೇತ್ರದಲ್ಲಿ ಭವ್ಯವಾದ ಮಂದಿರವೊಂದು ಇರಬೇಕು ಎಂದು ನಾನು ಆಶಿಸುತ್ತೇನೆ" ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಮಥುರಾದಲ್ಲಿ ದೇವಾಲಯವಿದೆ. ಕಾಶಿ ವಿಶ್ವನಾಥ್ ಕಾರಿಡಾರ್ ರೀತಿಯಲ್ಲಿ ಅದನ್ನು ಅಭಿವೃದ್ಧಿಪಡಿಸಬೇಕು" ಎಂದಿದ್ದಾರೆ.
"ಕಾಶಿ ವಿಶ್ವನಾಥನ ನವೀಕರಣ ಹಾಗೂ ಪುನರ್ ಅಭಿವೃದ್ಧಿ ಬಹಳ ಕಷ್ಟಕರವಾಗಿತ್ತು. ಇದು ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿಯನ್ನು ತೋರಿಸುತ್ತದೆ. ಅದೇ ರೀತಿ ಮಥುರಾದಲ್ಲೂ ಆಗಲಿದೆ" ಎಂದು ಹೇಳಿದ್ದಾರೆ.
"ರಾಮ ಜನ್ಮಭೂಮಿ ಹಾಗೂ ಕಾಶಿಯ ಮರುಸ್ಥಾಪನೆಯ ಬಳಿಕ, ಸ್ವಾಭಾವಿಕವಾಗಿ ಮಥುರಾವನ್ನು ಅಭಿವೃದ್ದಿಗೊಳಿಸುವುದು ಪ್ರಮುಖವಾಗುತ್ತದೆ" ಎಂದಿದ್ದಾರೆ.
"ಶ್ರೀ ಕೃಷ್ಣನ ಜನ್ಮಸ್ಥಳವಾದ ಮಥುರಾದ ಸಂಸದೆಯಾಗಿರುವುದರಿಂದ ಅಲ್ಲಿ ಭವ್ಯವಾದ ದೇವಾಲಯ ಇರಬೇಕು ಎಂದು ನಾನು ಬಯಸುತ್ತೇನೆ. ಅಲ್ಲಿ ಈಗಾಗಲೇ ದೇವಾಲಯವಿದೆ. ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯಲ್ಲಿ ದೇವಾಲಯದಿಮದ ನದಿಗೆ ನೇರವಾಗಿ ಸಂಪರ್ಕ ಕಲ್ಪಿಸಲಾಗಿದೆ" ಎಂದು ಹೇಳಿದ್ಧಾರೆ.