ಲಕ್ನೋ, ಡಿ.20 (DaijiworldNews/PY): "ಸರ್ಕಾರದ ರಚನೆಗೂ ಮುನ್ನ 2017ರಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಏಕೆಂದರೆ, ನಾವು ಜನರ ಸೇವೆಯೇ ನಿಜವಾದ ರಾಮ ರಾಜ್ಯವೆಂದು ಭಾವಿಸಿದ್ದೇವೆ" ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಲಕ್ನೋದಲ್ಲಿ ಮಾತನಾಡಿದ ಅವರು, "ಕಳೆದು 5 ವರ್ಷಗಳಲ್ಲಿ ಹೊಸ ಉತ್ತರ ಪ್ರದೇಶ ಸೃಷ್ಠಿಯಾಗಿದೆ. ಹೊಸ ರಾಜ್ಯದಲ್ಲಿ ಒಂದು ಕಡೆ ಧಾರ್ಮಿಕ ಸ್ಥಳಗಳ ಅಭಿವೃದ್ದಿಯಾಗುತ್ತಿದ್ದರೆ, ಮತ್ತೊಂದೆಡೆ ಮಾಫಿಯಾವನ್ನು ತೊಡೆದುಹಾಕಲಾಗುತ್ತಿದೆ" ಎಂದಿದ್ಧಾರೆ.
"ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಮಾಜದ ಪ್ರತಿಯೊಂದು ವರ್ಗದ ಅಗಾಧ ಅಭಿವೃದ್ದಿಗೆ ಬಿಜೆಪಿಯ ತುಷ್ಟೀಕರಣ ನೀತಿಯೇ ಕಾರಣ. ಬಡವರಿಗೆ 5 ಲಕ್ಷ ರೂ. ವರೆಗೆ ಉಚಿತ ವಸತಿ, ಶೌಚಾಲಯಗಳು ಹಾಗೂ ವಿಮಾ ರಕ್ಷಣೆಯಲ್ಲಿ ಒದಗಿಸುವ ಕಾರ್ಯವೇ ನಿಜವಾದ ರಾಮರಾಜ್ಯ" ಎಂದು ತಿಳಿಸಿದ್ದಾರೆ.
"ಪ್ರಯಾಗ್ರಾಜ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಮಿಕರ ಪಾದಗಳನ್ನು ತೊಳೆದರು. ಕಾಶಿಯಲ್ಲಿ ಕಾರ್ಮಿಕರ ಮೇಲೆ ಗುಲಾಬಿ ಹೂವನ್ನು ಸುರಿಸದವರು. ಕಾಶಿ ವಿಶ್ವನಾಥ ದೇವಾಲಯದಲ್ಲಿ ದೇವರಿಗೆ ನಮನ ಸಲ್ಲಿಸಿದ್ದು, ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ "ಎಂದಿದ್ದಾರೆ.
"ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಅಥವಾ ಕಾಂಗ್ರೆಸ್ ಪಕ್ಷ, ಬರ್ಸಾನಾ, ಗೋಕುಲ್, ಮಥುರಾ, ವೃಂದಾವನ, ಗೋವರ್ಧನ್, ನಂದಗಾಂವ್ ಹಾಗೂ ಬಲ್ದಿಯೊಗೆ ರಾಮಮಂದಿರ ನಿರ್ಮಾಣ ಸೇರಿದಂತೆ ವಿವಿಧ ತೀರ್ಥಕ್ಷೇತ್ರಗಳ ಅಭಿವೃದ್ದಿಗೆ ವಿಶೇಷವಾದ ಸ್ಥಾನಮಾನ ನೀಡುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ.