ನವದೆಹಲಿ, ಡಿ.20 (Daijiworld/PY): "ಹಿಂದುತ್ವದಲ್ಲಿ ನಂಬಿಕೆಯುಳ್ಳವರು ಎಲ್ಲಾ ಭಾರತೀಯರ ಡಿಎನ್ಎ ಒಂದೇ ಎಂದು ಭಾವಿಸುತ್ತಾರೆ. ಆದರೆ, ಹಿಂದೂಗಳಾದವರು ಮಾತ್ರವೇ ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟವಾದ ಡಿಎನ್ಎ ಹೊಂದಿದ್ದಾರೆ ಎಂದು ನಂಬುತ್ತಾರೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
40,000 ವರ್ಷಗಳಿಂದ ಎಲ್ಲಾ ಭಾರತೀಯರ ಡಿಎನ್ಎ ಒಂದೇ ಆಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸಿದ್ದು, "ಪ್ರತಿಯೋರ್ವ ವ್ಯಕ್ತಿಯ ಡಿಎನ್ಎ ಸಹ ವಿಭಿನ್ನವಾಗಿದೆ" ಎಂದಿದ್ದಾರೆ.
ಹಿಂದು ಹಾಗೂ ಹಿಂದುತ್ವಾದಿಗಳ ಮಧ್ಯೆ ವ್ಯತ್ಯಾಸ ಇರುವುದಾಗಿ ಇತ್ತೀಚೆಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ.
"ಮಹಾತ್ಮ ಗಾಂಧಿ ಹಿಂದೂ ಅವರು ಹಿಂದುತ್ವವಾದಿ ಅಲ್ಲ. ಸದ್ಯ ದೇಶದ ಆಡಳಿತವು ಹಿಂದುತ್ವವಾದಿಗಳ ಕೈಯಲ್ಲಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಹಿಂದುಗಳನ್ನು ಅಧಿಕಾರದಲ್ಲಿ ಕೂರಿಸಬೇಕು" ಎಂದು ಹೇಳಿದ್ದರು.