ನವದೆಹಲಿ, ಡಿ.19 (DaijiworldNews/HR): ಅನೇಕ ಮಾಧ್ಯಮ ಸಹಚರರು ಕೇವಲ ಒಬ್ಬ ವ್ಯಕ್ತಿಯ ಮುಖವನ್ನು ತೋರಿಸುತ್ತಿದ್ದಾರೆ, ಆದರೆ ಆ ವ್ಯಕ್ತಿ ಯಾವಗಾದರೂ ನಿಮ್ಮ ಪರವಾಗಿ ಮಾತನಾಡಿದ್ದಾರೆಯೇ?' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಪತ್ರಕರ್ತರಿಗೆ ಕೆಲಸ ಮಾಡಲು ಭಾರತ ಅಪಾಯಕಾರಿ ದೇಶ ಎಂಬ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, "ಭಾರತದಲ್ಲಿ ಅನೇಕ ಮಾಧ್ಯಮಗಳು ಒಬ್ಬ ವ್ಯಕ್ತಿಯ ಆರಾಧನೆಯಲ್ಲಿ ತೊಡಗಿಕೊಂಡಿದ್ದು, ಬೇರೆ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ. ಅದನ್ನು ಸಾರ್ವಜನಿಕರಿಗೆ ತಲುಪಲು ಬಿಡುತ್ತಿಲ್ಲ. ಆದರೆ ಆ ಒಬ್ಬ ವ್ಯಕ್ತಿ ಎಂದಾದರೂ ನಿಮ್ಮ ಪರವಾಗಿ ಬಂದಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ನಿಮಗೆ ಸರಿ ಅನಿಸಿದ್ದನ್ನು ಮಾಡಿ. ಆದರೆ ನೆನಪಿರಲಿ, ನಿಮ್ಮ ಮೇಲೆ ಅನ್ಯಾಯ, ಹಿಂಸಾಚಾರ ನಡೆದರೆ ನಾನು ನಿಮ್ಮ ಜೊತೆ ಇರುತ್ತೇನೆ" ಎಂದು ಹೇಳಿದ್ದಾರೆ.